ರೈಲಿನಿಂದ ಬಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಒಂದೂವರೆ ಕಿಮೀ ಓಡಿ ಮಾನವೀಯತೆ ಮೆರೆದ ಪೊಲೀಸ್ ಪೇದೆ!
ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತಿಕೊಂಡು ಸುಮಾರು ಒಂದೂವರೆ ಕಿಮೀ ಓಡಿ ಆಸ್ಪತ್ರೆಗೆ ಸೇರಿಸಿ ಆತನ ...
ಹೊಶಾಂಗಬಾದ್: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತಿಕೊಂಡು ಸುಮಾರು ಒಂದೂವರೆ ಕಿಮೀ ಓಡಿ ಆಸ್ಪತ್ರೆಗೆ ಸೇರಿಸಿ ಆತನ ಜೀವವನ್ನುಉಳಿಸಿಕೊಂಡಿರುವ ಘಟನೆ ಮಧ್ಯ ಪ್ರದೇಸದಲ್ಲಿ ನಡೆದಿದೆ.
ಪೊಲೀಸ್ ಪೇದೆ ರೈಲಿನಿಂದ ವ್ಯಕ್ತಿಯನ್ನುಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋಗಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ, ತೀವ್ರ ಗಾಯಗೊಂಡಿರುವ ವ್ಯಕ್ತಿಯನ್ನು ಪೊಲೀಸ್ ಪೇದೆ ಪೂನಂ ಬಿಲಿಯರ್ ಎಂಬುವರು ಅಜಿತ್ ಎಂಬಾತನನ್ನು ರಕ್ಷಿಸಿದ್ದಾರೆ.
ಉತ್ತರ ಪ್ರದೇಶದ ಅಜಿತ್ ಮುಂಬಯಿಯಂದ ಬರುತ್ತಿದ್ದ ರೈಲಿನಿಂದ ಕೆಳಗೆ ಬಿದಿದ್ದರು, ಅವರನ್ನು ಆಸ್ಪತ್ರೆಗೆ ಸಾಗಿಸಲು ಬಂದ ವಾಹನದ ದಾರಿಯಲ್ಲಿ ಬೆಟ್ಟ ಗುಡ್ಡಗಳಿದ್ದ ಪರಿಣಾಮ ಶೀಘ್ರವಾಗಿ ತಲುಪಲು ಸಾಧ್ಯವಿಲ್ಲ, ಈ ವೇಳೆ ಸ್ಥಳಕ್ಕೆ ಡ್ರೈವರ್ ಜೊತೆ ಬಂದ ಪೇದೆ ಅಜಿತ್ ನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ, ಚಿಕಿತ್ಸೆ ಪಡೆದ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.