ದೇಶ

ಬೆಂಗಳೂರು ಬೆನ್ನಲ್ಲೇ ಚೆನ್ನೈನಲ್ಲೂ ಪಾರ್ಕಿಂಗ್ ಲಾಟ್ ನಲ್ಲಿ ಬೆಂಕಿ ಅವಘಡ, 176 ಕಾರುಗಳು ಬೆಂಕಿಗೆ ಆಹುತಿ

Srinivasamurthy VN
ಚೆನ್ನೈ: ಬೆಂಗಳೂರು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ್ದ ಭೀಕರ ಅಗ್ನಿ ಅವಘಡ ಮಾದರಿಯಲ್ಲೇ ಚೆನ್ನೈನಲ್ಲೂ ಬೆಂಕಿ ಅವಘಡ ಸಂಭವಿಸಿದ್ದು, ಪಾರ್ಕಿಂಗ್ ಲಾಟ್ ನಲ್ಲಿದ್ದ 176 ಕಾರುಗಳು ಬೆಂಕಿಗೆ ಆಹುತಿಯಾಗಿದೆ.
ಭಾನುವಾರ ಮಧ್ಯಾಹ್ನ ಚೆನ್ನೈನ ಪೊರೂರ್ ಪ್ರದೇಶದಲ್ಲಿ ಬೆಂಕಿ ಬಿದ್ದಿದ್ದು, ಗ್ರೌಂಡ್ ನಲ್ಲಿ ನಿಲ್ಲಿಸಲಾಗಿದ್ದ ಸುಮಾರು 174 ಪ್ರಯಾಣಿಕ ಕಾರುಗಳಿಗೆ  ಬಿದ್ದು, ಹಾನಿಯಾಗಿದೆ. ವಾಹನಗಳನ್ನು ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್ ಬಳಿ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆಗೆ ನಮಗೆ ಮಾಹಿತಿ ಸಿಕ್ಕಿತು. ಬೆಂಕಿ ನಂದಿಸುವ ಸಲುವಾಗಿ ಆರು ವಾಹನಗಳನ್ನು ಕಳುಹಿಸಲಾಯಿತು. ಆ ನಂತರ ಬೆಂಕಿಯನ್ನು ನಂದಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿ ಪಿ.ಶರವಣನ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಂತೆಯೇ ಬೆಂಕಿ ಹೊತ್ತಿಕೊಳ್ಳುವುದರಲ್ಲಿದ್ದ ಮೂವತ್ತೆರಡು ವಾಹನಗಳನ್ನು ಅನಾಹುತದಿಂದ ತಪ್ಪಿಸಲಾಗಿದೆ. ಬೆಂಕಿ ಹೊತ್ತುಕೊಳ್ಳುವುದಕ್ಕೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ. ಇದೇ ಮಾದರಿಯ ಅಗ್ನಿ ಅವಘಡ ಬೆಂಗಳೂರಿನ ಯಲಹಂಕದ ವಾಯು ನೆಲೆಯ ಎದುರು ಶನಿವಾರ ಸಂಭವಿಸಿ, ಮುನ್ನೂರಕ್ಕೂ ಹೆಚ್ಚು ಕಾರುಗಳು ಹಾನಿಗೀಡಾಗಿದ್ದವು.
SCROLL FOR NEXT