ಬೆಂಗಳೂರು: ಏರ್ ಇಂಡಿಯಾ ನೌಕರನಿಗೆ ಇಂಡಿಗೋ ವಿಮಾನ ಡಿಕ್ಕಿ, ಬೆನ್ನು ಮೂಳೆ ಮುರಿತ!
ಬೆಂಗಳೂರು: ಏರ್ ಇಂಡಿಯಾ ವಿಮಾನ ಸಂಸ್ಥೆ ತನ್ನ ನೌಕರನಿಗೆ ಪರಿಹಾರ ನೀಡುವಂತೆ ಇಂಡಿಗೋ ವಿಮಾನ ಸಂಸ್ಥೆಯನ್ನು ಆಗ್ರಹಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಸಂಸ್ಥೆಯ ನೌಕರನಿಗೆ ಇಂಡಿಗೋ ವಿಮಾನ ಸಂಸ್ಥೆ ಡಿಕ್ಕಿ ಹೊಡೆದಿದ್ದು ಪರಿಹಾರ ನೀಡುವಂತೆ ಏರ್ ಇಂಡಿಯಾ ವಿಮಾನ ಸಂಸ್ಥೆ ಕೇಳಿದೆ.
ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್ ನ ನೌಕರ ಶಿವ ಶಂಕರ್ ಟರ್ಮಿನಲ್ ಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಸ್ವತಃ ಇಂಡಿಗೋ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಏರ್ ಇಂಡಿಯಾದ ಸಿಬ್ಬಂದಿ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸದೇ ಪಾರಾಗಿದ್ದಾರೆ, ಸಣ್ಣ ಪುಟ್ಟ ಗಾಯಗಳಾಗಿದ್ದು, ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ, ಇಂಡಿಗೋ ಸಂಸ್ಥೆ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದೆ.
ಇದೇ ವೇಳೆ ಏರ್ ಇಂಡಿಯಾ ಸಹ ಹೇಳಿಕೆ ಬಿಡುಗಡೆ ಮಾಡಿದ್ದು, ಇಂಡಿಗೋ ವಿಮಾನ ನಮ್ಮ ನೌಕರ ಶಿವ ಶಂಕರ್ ಗೆ ಡಿಕ್ಕಿ ಹೊಡೆದಿದ್ದು, ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಗಂಭೀರ ಗಾಯಗಳಾಗಿದ್ದು, ಬೆನ್ನೆಲುಬು ಮುರಿದಿದ್ದು, ಆತನ ಚೇತರಿಕೆಗೆ ನಾವು ಪ್ರಾರ್ಥಿಸುತ್ತಿದ್ದೇವೆ. ಇಂಡಿಗೋ ಸಂಸ್ಥೆ ಸೂಕ್ತ ಪರಿಹಾರ ನೀಡಬೇಕು, ಇದಲ್ಲದೇ ಕಾನೂನು ಕ್ರಮವನ್ನೂ ಎದುರಿಸಬೇಕೆಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics