ಸೈನಿಕರ ಮಾನವ ಹಕ್ಕುಗಳ ಕುರಿತು ನಿಯಮಾವಳಿ: ಸೈನ್ಯಾಧಿಕಾರಿಗಳ ಮಕ್ಕಳ ಮನವಿ ವಿಚಾರಣೆಗೆ ಸುಪ್ರೀಂ ಅಸ್ತು 
ದೇಶ

ಸೈನಿಕರ ಮಾನವ ಹಕ್ಕುಗಳ ಕುರಿತು ನಿಯಮಾವಳಿ: ಸೈನ್ಯಾಧಿಕಾರಿಗಳ ಮಕ್ಕಳ ಮನವಿ ವಿಚಾರಣೆಗೆ ಸುಪ್ರೀಂ ಅಸ್ತು

ಭದ್ರತಾ ಪಡೆ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆಯನ್ನು ಕೋರಿ ಇಬ್ಬರು ಸೇನಾಧಿಕಾರಿಗಳ ಹೆಣ್ಣು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.

ನವದೆಹಲಿ: ಭದ್ರತಾ ಪಡೆ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆಯನ್ನು ಕೋರಿ ಇಬ್ಬರು ಸೇನಾಧಿಕಾರಿಗಳ ಹೆಣ್ಣು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.

ಪ್ರೀತಿ ಕೇದಾರ್ ಗೋಖೆಲೆ, ಕಾಜಲ್ ಮಿಶ್ರಾ ಅವರುಗಳು ಸಲ್ಲಿಸಿದ ಮನವಿಯಲ್ಲಿ ಭದ್ರತಾ ಸಿಬ್ಬಂದಿಗಳ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಷೇಧಿಸುವ ಕುರಿತು ನೀತಿ ನಿರೂಪಣೆ ಆಗಬೇಕೆಂದು ಕೇಳಲಾಗಿದೆ.

ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಒಳಗೊಂಡ ನ್ಯಾಯಪೀಠವು ಈ ಮನವಿ ಕೇಳಲು ಒಪ್ಪಿಕೊಂಡಿದ್ದು, ಭಾರತದ ಒಕ್ಕೂಟ, ರಕ್ಷಣಾ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಗೆ ನೋಟೀಸ್ ಜಾರಿ ಮಾಡಿದೆ.

ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಹಾಗೂ ಅಶಿಸ್ತಿನ ವೇಳೆ ಜನಸಮೂಹ ದಾಳಿ ಅಥವಾ ಏಕವ್ಯಕ್ತಿ ದಾಳಿಯಾಗುವ ಸಮಯದಲಿ ಲಿಟರಿ ಕರ್ತವ್ಯದ ಸಮಯದಲ್ಲಿ ದಾಳಿ ಮಾಡುವ ವ್ಯಕ್ತಿಗಳ ಹಕ್ಕುಗಳನ್ನು ಕಾಪಾಡುವ ಸಲುವಾಗಿ  ಸಮಗ್ರ ನೀತಿಯನ್ನು ರಚಿಸುವ ಸಲುವಾಗಿ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಪ್ರೀತಿ ಹಾಗೂ ಕಾಜಲ್ ಸೂಚಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಷೋಪಿಯನ್  ನಂತಹಾ ಪ್ರದೇಶದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುವ  "ಅಶಿಸ್ತಿನ ಮತ್ತು ವಿಚ್ಛಿದ್ರಕಾರಕ ಜನಸಮೂಹದ ಘಟನೆ" ಯಿಂದ ಬಹಳ ತೊಂದರೆಯಾಗುತ್ತಿದೆ.

"ಅರ್ಜಿದಾರರು ಭಾರತೀಯ ಸೈನ್ಯದ ಕಡೆಯಲ್ಲಿದ್ದು ಅವರು ಕಲ್ಲೇಟು ಹೊಡೆಯುವವರಿಂದ ಬಹಳಷ್ಟು ತೊಂದರೆ ಪಟ್ಟಿದ್ದಾರೆ.ಆದರೆ ತಮ್ಮ ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸತತ ಪ್ರಯತ್ನದಲ್ಲಿದ್ದಾರೆ." ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT