ಸೇನಾ ಮುಖ್ಯಸ್ಥರ ಜಂಟಿ ಸುದ್ದಿಗೋಷ್ಠಿ 
ದೇಶ

ಪಾಕಿಸ್ತಾನ ಯಾವುದೇ ರೀತಿಯ ದುಸಾಹಸಕ್ಕೆ ಮುಂದಾದರೆ ಎದಿರೇಟು ನೀಡಲು ಸಿದ್ದ- ಸೇನಾ ಮುಖ್ಯಸ್ಥರ ಎಚ್ಚರಿಕೆ

ಪಾಕಿಸ್ತಾನ ಯಾವುದೇ ರೀತಿಯ ದುಸಾಹಸಕ್ಕೆ ಕೈ ಹಾಕಿದರೆ ಎದಿರೇಟು ನೀಡಲು ಭಾರತೀಯ ಸೇನೆ ಸಿದ್ಧವಿರುವುದಾಗಿ ಭೂ, ನೌಕಾ ಹಾಗೂ ವಾಯು ಸೇನೆಯ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಪಾಕಿಸ್ತಾನ ಯಾವುದೇ ರೀತಿಯ ದುಸಾಹಸಕ್ಕೆ ಕೈ ಹಾಕಿದರೆ ಎದಿರೇಟು ನೀಡಲು ಭಾರತೀಯ ಸೇನೆ ಸಿದ್ಧವಿರುವುದಾಗಿ ಭೂ, ನೌಕಾ ಹಾಗೂ ವಾಯು ಸೇನೆಯ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ, ಸೇನಾ ಮೇಜರ್ ಜನರಲ್ ಸುರೇಂದ್ರ ಸಿಂಗ್ ಬೆಹಾಲ್ , ನೌಕ ಪಡೆಯ ಅಡ್ಮೀರಲ್ ಡಿಎಸ್ ಗುಜ್ರಾಲ್ , ವಾಯುಪಡೆಯ ಏರ್ ಮಾರ್ಷಲ್  ಆರ್ ಜಿಕೆ ಕಪೂರ್,  ದೇಶಕ್ಕೆ ಭದ್ರತೆ ಹಾಗೂ ನಾಗರಿಕರಿಗೆ ರಕ್ಷಣೆ ಒದಗಿಸಲು ದೃಢವಾದ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಘೋಷಿಸಿದರು.
ಪಾಕಿಸ್ತಾನದ ಎಫ್ -16 ಯುದ್ಧ ವಿಮಾನಗಳು ಭಾರತದತ್ತ ಬರುತ್ತಿರುವುದು ರಡಾರ್ ನಲ್ಲಿ ಪತ್ತೆಯಾಗಿತ್ತು. ನಮ್ಮ ನೆಲೆಗಳನ್ನು ಗುರಿಯಾಗಿ ದಾಳಿ ನಡೆಸಲು ಎಫ್ -16 ವಿಮಾನಗಳು  ಬರುತ್ತಿರುವುದು ಪತ್ತೆಯಾಗಿದ್ದರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ದಾಳಿ ನಡೆಸಿ ಆ ವಿಮಾನವನ್ನು ಹೊಡೆದುರುಳಿಸಲಾಯಿತು ಎಂದು ತಿಳಿಸಿದರು.
ಈ ಕಾರ್ಯಾಚರಣೆ ವೇಳೆಯಲ್ಲಿ ನಮ್ಮ ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ.ದಾಳಿ ಬಗ್ಗೆ ಪಾಕಿಸ್ತಾನ ಹಲವು  ಸುಳ್ಳು ಹೇಳಿಕೆಗಳನ್ನು ನೀಡಿತ್ತು. ಮೊದಲಿಗೆ ಮೂರು ಪೈಲಟ್ ಗಳಿದ್ದಾರೆ ಎಂದಿದ್ದ ಪಾಕಿಸ್ತಾನ ನಂತರ ಒಬ್ಬರು ಪೈಲಟ್ ಇದ್ದರೆಂದು ಹೇಳಿಕೆ ನೀಡಿತ್ತು ಎಂದು ಹೇಳಿದರು.
ಎಫ್-16 ವಿಮಾನಗಳು ಭಾರತದ ಗಡಿ ಪ್ರವೇಶಿಸಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಅದರ ಬಿಡಿ ಭಾಗಗಳನ್ನು ಭಾರತದ ಗಡಿಪ್ರದೇಶದೊಳಗೆ ವಶಪಡಿಸಿಕೊಂಡಿರುವುದಾಗಿ ಆರ್ ಜಿಕೆ ಕಪೂರ್  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel