ನವದೆಹಲಿ: ಭಾರತೀಯ ವಾಯುಪಡೆ ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿದ ನಂತರ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಸಹ ಕರೆದಿಲ್ಲ. ದಾಳಿಯ ಬಗ್ಗೆ ಯಾವುದೇ ಪಕ್ಷಕ್ಕೂ ಮಾಹಿತಿ ಇಲ್ಲ. ಆ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಫೆಬ್ರವರಿ 26ರಂದು ನಡೆದ ವೈಮಾನಿಕ ದಾಳಿಯ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಮಾಹಿತಿ ನೀಡಿಲ್ಲ. ದಾಳಿಯ ಬಗ್ಗೆ ಮಾಧ್ಯಮಗಳಿಂದ ಮಾತ್ರ ಮಾಹಿತಿ ಸಿಕ್ಕಿದೆ. ಆದರೆ ಕೇಂದ್ರ ಸರ್ಕಾರ ಅಧಿಕೃತವಾಗಿ ದಾಳಿಯ ಬಗ್ಗೆ ಮಾಹಿತಿ ನೀಡಬೇಕು ಎಂದು ದೀದಿ ಆಗ್ರಹಿಸಿದ್ದಾರೆ.
ವೈಮಾನಿಕ ದಾಳಿ ಯಾವ ಪ್ರದೇಶದಲ್ಲಿ ನಡೆಯಿತು. ಎಷ್ಟು ಬಾಂಬ್ ಗಳನ್ನು ಉಗ್ರರ ಮೇಲೆ ಎಸೆಯಲಾಯಿತು? ಎಷ್ಟು ಜನ ಹತರಾದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದಿದ್ದಾರೆ.
ಕೆಲ ವಿದೇಶಿ ಮಾಧ್ಯಮಗಳು ಹೇಳುವಂತೆ ದಾಳಿಯಲ್ಲಿ ಒಬ್ಬರೂ ಹತರಾಗಿಲ್ಲ. ಇನ್ನು ಕೆಲ ಮಾಧ್ಯಮಗಳ ಪ್ರಕಾರ ಒಬ್ಬ ವ್ಯಕ್ತಿ ಸತ್ತಿದ್ದಾನೆ. ಹಾಗಾಗಿ ಇಡೀ ದೇಶಕ್ಕೆ ಸತ್ಯ ಗೊತ್ತಾಗಬೇಕು ಎಂದು ಮಮತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics