ದೇಶ

ಆಂಧ್ರಪ್ರದೇಶಕ್ಕೆ ಸಿಕ್ಕಿತು ಹೊಸ ರೈಲ್ವೆ ವಿಭಾಗ: ವಿಶಾಖಪಟ್ಟಣದಲ್ಲಿ ಕೇಂದ್ರ ಕಚೇರಿ

Srinivas Rao BV
ವಿಶಾಖಪಟ್ಟಣಂ: ವಿಭಜನೆ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಯಂತೆ ಆಂಧ್ರಪ್ರದೇಶಕ್ಕೆ ಹೊಸ ದಕ್ಷಿಣ ಕೋಸ್ಟ್ ರೈಲ್ವೆ ವಿಭಾಗವನ್ನು ಘೋಷಿಸಲಾಗಿದೆ. 
ರೈಲ್ವೆ ಸಚಿವ ಪೀಯೂಷ್ ಗೋಯಲ್, ಫೆ.28 ರಂದು ಆಂಧ್ರಪ್ರದೇಶಕ್ಕೆ ಹೊಸ ದಕ್ಷಿಣ ಕೋಸ್ಟ್ ರೈಲ್ವೆ ವಿಭಾಗದ ಘೋಷಣೆ ಮಾಡಿದ್ದು ವಿಶಾಖಪಟ್ಟಣಂ ನಲ್ಲಿ ಕೇಂದ್ರ ಕಚೇರಿ ಸ್ಥಾಪನೆಯಾಗಲಿದೆ. 
ಈಗಾಗಲೇ ಇರುವ ಗುಂಟಕಲ್, ಗುಂಟೂರು, ವಿಜಯವಾಡ ರೈಲ್ವೆ ವಿಭಾಗಗಳನ್ನು ಸೌತ್ ಕೋಸ್ಟ್ ರೈಲ್ವೆ ವಿಭಾಗ ಒಳಗೊಳ್ಳಲಿದೆ
ಆಂಧ್ರಪ್ರದೇಶದ ವಿಭಜನೆ ವೇಳೆ ಭಾರತೀಯ ರೈಲ್ವೆ ಹೊಸ ರೈಲ್ವೆ ವಲಯವನ್ನು ಸ್ಥಾಪನೆಯಾಗಬೇಕಿತ್ತು. ಈ ವಿಷಯವನ್ನು ಪರಿಶೀಲಿಸಿ, ವಿಶಾಖಪಟ್ಟಣಂ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹೊಸ ರೈಲ್ವೆ ವಿಭಾಗವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಗುಂಟಕಲ್, ಗುಂಟೂರು, ವಿಜಯವಾಡ ವಿಭಾಗಗಳು ಈಗಿನ ಸೌತ್ ಸೆಂಟ್ರಲ್ ರೈಲ್ವೆಯ ಭಾಗವಾಗಿದ್ದು ಸಿಕಂದರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ.
ಭುವನೇಶ್ವರದಲ್ಲಿ ಮುಖ್ಯ ಕಚೇರಿ ಹೊಂದಿರುವ ಈಸ್ಟ್ ಕೋಸ್ಟ್ ರೈಲ್ವೆ ಈಗ ವಿಭಜನೆಯಾಗಲಿದ್ದು, ಒಂದು ಭಾಗ ಹೊಸ ವಲಯದೊಂದಿಗೆ ಸೇರ್ಪಡೆಗೊಂಡರೆ, ಮತ್ತೊಂದು ಭಾಗವನ್ನು ಹೊಸ ವಿಭಾಗವನ್ನಾಗಿಸಿ ರಾಯಗಢದಲ್ಲಿ ಕೇಂದ್ರ ಕಚೇರಿ ಸ್ಥಾಪನೆ ಮಾಡಲಾಗುತ್ತದೆ. 
SCROLL FOR NEXT