ದೇಶ

ಕಾಂಗ್ರೆಸ್ ಇಟಲಿ ಮಹಿಳೆ ಬಗ್ಗೆ ಚಿಂತಿಸುತ್ತದೆಯೇ ವಿನಾಃ ಭಾರತದ ಮುಸ್ಲಿಮ್ ಮಹಿಳೆಯರ ಬಗೆಗಲ್ಲ: ಸ್ವಾಮಿ

Shilpa D
ನವದೆಹಲಿ: ಕಾಂಗ್ರೆಸ್ ಪಕ್ಷ ಸದಾ ಇಟಲಿಯ ಮಹಿಳೆಯ ಬಗ್ಗೆ ಚಿಂತಿಸುತ್ತದೆಯೇ ಹೊರತು ಭಾರತೀಯ ಮುಸ್ಲಿಮ್ ಮಹಿಳೆ ಬಗ್ಗೆ ಯೋಚಿಸುವುದಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ರಾಜ್ಯ ಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಪಾಸು ಮಾಡಲು ಸರ್ಕಾರದ ಮಾಡಿದ ಪ್ರಯತ್ನವನ್ನು ವಿರೋಧ ಪಕ್ಷಗಳು ಒಟ್ಟಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. 
ಪರಿಷ್ಕೃತ ತ್ರಿವಳಿ ತಲಾಖ್ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಅಂಗೀಕರಿಸಿಲ್ಲ, ಈ ಮಸೂದೆ ಪ್ರಕಾರ ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧ ಎಂದು  ಮಸೂದೆಯಲ್ಲಿ ತಿಳಿಸಿದೆ. ತ್ರಿವಳಿ ತಲಾಖ್ ಮಸೂದೆ, ಪಸು ಮಾಡಲು ಬಿಡಲಿಲ್ಲ, ರಾಜ್ಯಸಭೆಯನ್ನು ಜನವರಿ 2 ಕ್ಕೆ ಸದನವನ್ನು ಮುಂದೂಡಲಾಗಿದೆ. 
ಇದೊಂದು ನಂಬರ್ ಗೇಮ್, ವಿರೋಧ ಪಕ್ಷ ಮಸೂದೆ ಪಾಸು ಮಾಡಲು ಬಿಡದೇ ಗದ್ದಲ ಸೃಷ್ಟಿ ಮಾಡಲಾಯಿತು. ನಮಗೆ ಹೇಳುವುದಕ್ಕೆ ಬೇಸರವಾಗುತ್ತದೆ. ಕಾಂಗ್ರೆಸ್ ಗೆ ಕೇವಲ ಇಟಲಿ ಮಹಿಳೆಯ ಬಗ್ಗೆ ಮಾತ್ರ ಚಿಂತೆ ಎಂದು ಲೇವಡಿ ಮಾಡಿದ್ದಾರೆ.
SCROLL FOR NEXT