ದೇಶ

ರಾಮ ಭಕ್ತ ಹನುಮನಿಗೆ ಸಾಂಟಾ ಕ್ಲಾಸ್'ನಂತೆ ಅಲಂಕಾರ: ವಿವಾದದಲ್ಲಿ ಗುಜರಾತ್ ದೇಗುಲ

Manjula VN
ಗುಜರಾತ್: ಶ್ರೀರಾಮ ಭಕ್ತ ಹನುಮಂತನಿಗೆ ಸಾಂಟಾ ಕ್ಲಾಸ್ ನಂತೆ ಅಲಂಕಾರ ಮಾಡಿದ್ದ ಗುಜರಾತ್'ನಲ್ಲಿರುವ ದೇಗುಲವೊಂದು ಇದೀಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. 
ಗುಜರಾತ್ ರಾಜ್ಯ ಬೊಟಡ್ ಜಿಲ್ಲೆಯ ಸರಂಗ್ಪುರ್ ದೇಗುಲದಲ್ಲಿ ಹನುಮಂತನಿಗೆ ಸಾಂಟಾ ಕ್ಲಾಸ್ ರೀತಿ ಡಿ.30 ರಂದು ಅಲಂಕಾರ ಮಾಡಿ, ಸಾಂಟಾ ಕ್ಲಾಸ್ ತೊಡುವ ರೀತಿಯ ಬಟ್ಟೆಗಳನ್ನು ತೊಡಿಸಿದ್ದಾರೆ. ಇದರಿಂದ ದೇಗುಲಕ್ಕೆ ಬಂದ ಹಲವಾರು ಹಿಂದೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ವಿವಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ದೇಗುಲದ ಆಡಳಿತ ಮಂಡಳಿ, ಅಮೆರಿಕಾ ಮೂಲಗ ಕೆಲ ಹನುಮ ಭಕ್ತರು ದೇವರಿಗೆ ಬಟ್ಟೆಗಳನ್ನು ಕಳುಹಿಸಿಕೊಟ್ಟಿದ್ದರು. ಉಣ್ಣೆಯಿಂದ ಮಾಡಿದ ಬಟ್ಟೆಯಾಗಿದ್ದರಿಂದ ಅದು ದೇವರನ್ನು ಚಳಿಯಿಂದ ಕಾಪಾಡುತ್ತದೆ ಹೀಗಾಗಿ ತೊಡಿಸಲಾಗಿತ್ತು ಎಂದು ಹೇಳಿದ್ದಾರೆ. 
ಇನ್ನು ಸಾಂಟಾ ಕ್ಲಾಸ್ ನಂತೆ ದೇವರನ್ನು ಅಲಂಕಾರ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಬಳಿಕ ದೇಗುಲದ ಆಡಳಿತ ಮಂಡಳಿಯವರು ದೇವರ ಅಲಂಕಾರವನ್ನು ಬದಲಾಯಿಸಿದರೆಂದು ವರದಿಗಳು ತಿಳಿಸಿವೆ. 
SCROLL FOR NEXT