ದೇಶ

ಪ್ರಧಾನಿ ಮೋದಿ ಸ್ಕೀಮ್ ನಿಂದ 23.9 ದಶಲಕ್ಷ ಮನೆಗಳಿಗೆ ವಿದ್ಯುತ್, ಇನ್ನೂ 1 ದಶಲಕ್ಷ ಬಾಕಿ!

Raghavendra Adiga
ನವದೆಹಲಿ: ಕೇಂದ್ರದ ಮೋದಿ ಸರ್ಕಾರ ದೇಶದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಗುರಿಯನ್ನು ನಿರೀಕ್ಷಿತ ಅವಧಿಯಲ್ಲಿ ತಲುಪುವಲ್ಲಿ ವಿಫಲವಾಗಿದೆ. ವಿಶೇಷವೆಂದರೆ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕಟಿಸಿದ್ದ ಈ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ಸೋತಿದೆ. ಈ ವರ್ಷಾರಂಭದಿಂದ ಮುಂದಿನ ಲೋಕಸಭೆ ಚುನಾವಣೆ ಒಳಗೆ 2.3 ಶತಕೋಟಿ ಡಾಲರ್ ಮೊತ್ತದ ಈ ಯೋಜನೆ ಸಂಪೂರ್ಣ ಜಾರಿಯಾಗುವುದು ಬಹುತೇಕ ಅನುಮಾನವೆಂದೇ ಹೇಳಲಾಗುತ್ತಿದೆ.
ಕೇಂದ್ರದ  ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಬಿಡುಗಡೆಗೊಳಿಸಿದ ವರದಿಯ ಅನುಸಾರ 25 ರಾಜ್ಯಗಳಲ್ಲಿ 23.9 ಮಿಲಿಯನ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿರುವ ಈ ಯೋಜನೆ ಇನ್ನೂ  ನಾಲ್ಕು ರಾಜ್ಯಗಳಲ್ಲಿ ಸುಮಾರು 1.05 ಮಿಲಿಯನ್ ಮನೆಗಗಳಿಗೆ ತಲುಪಿಲ್ಲ. ವಿದ್ಯುತ್ ಸಚಿವ ಆರ್.ಕೆ ಸಿಂಗ್ ನವೆಂಬರ್ ಕಡೆ ವಾರದಲ್ಲಿ ನೀಡಿದ ಹೇಳಿಕೆಯಂತೆ ಸರ್ಕಾರ ತನ್ನ ಡಿಸೆಂಬರ್ 31ರ ಗುರಿಯನ್ನು ಇನ್ನೂ ಮೂರು ತಿಂಗಳಲ್ಲಿ ಮುಟ್ಟಲಿದೆ.
ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿರುವ ಮನೆಗಳು ಹಾಗೂ ಗ್ರಾಮಗಳಲ್ಲಿ ಹೊಸ ಸಂಪರ್ಕ ಕಲ್ಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೆ ಈ ಅಭೂತಪೂರ್ವ ಕೆಲಸದಿಂದ ನಾವೆಂದಿಗೂ ಹಿಂದೆ ಸರಿಯುವುದಿಲ್ಲ" ಅಭಿಷೇಕ್ ಜೈನ್ ಹೇಳಿದರು, ಇವರು ದೆಹಲಿಯ ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟ್ ಆಂಡ್ ವಾಟರ್  ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. "ಈಅಗ ನಾವು ನಿಯಮಿತ ಬಿಲ್ಲಿಂಗ್ ಮತ್ತು ವಿಶ್ವಾಸಾರ್ಹ ಸೇವೆಯತ್ತ ಗಮನ ನೀಡಬೇಕಿದೆ.ಹೀಗಾಗದೆ ಹೋದಲ್ಲಿ ಬಹುಸಂಖ್ಯಾತ ಗ್ರಾಹಕರು ದೀರ್ಘಕಾಲದ ಸಂಪರ್ಕದಿಂದ ವಂಚಿತರಾಗುವ ಅಪಾಯವಿದೆ." ಅವರು ಹೇಳಿದ್ದಾರೆ.
ಸಂಪೂರ್ಣ ವಿದ್ಯುದೀಕರಣ ಎನ್ನುವುದು ಮೋದಿಅವರ  ಪ್ರಮುಖ ಸುಧಾರಣೆಗಳಲ್ಲಿ ಒಂದಾಗಿದೆ, ಗ್ರಾಮೀಣ ಸಮುದಾಯಗಳಿಗೆ ಅವರ ಸರ್ಕಾರದಿಂದ ಈ ಕೊಡುಗೆ ನೀಡಲು ಭಾರತೀಯ ಜನತಾ ಪಕ್ಷ ಮುಂದಾಗಿದ್ದು ಇದಾಗಲೇ ನಿರೋದ್ಯೋಗ ಹಾಗೂ ಇತರೆ ಸಮಸ್ಯೆಗಳಿಂದ ಅತೃಪ್ತರಾದವರಿಗೆ ಈ  ರೀತಿಯ ಕೊಡುಗೆ ಮೂಲಕ ಸಮಾಧಾನಗೊಳಿಸಲು ಮುಂದಾಗಿದೆ.ಮುಂಬರುವ ದಿನಗಳಲ್ಲಿ ಲೋಕಸಭೆ ಚುನಾವಣೆಗಳು ಬಂದಿದ್ದು ಮೋದಿ ಸರ್ಕಾರಕ್ಕೆ ಈ ವಿದ್ಯುತ್ ಸಂಪರ್ಕ ಯೋಜನೆ ಯಶಸ್ಸು ರಾಜಕೀಯ ವರದಾನವಾಗಲಿದೆ ಎಂದು ಊಹಿಸಲಾಗಿದೆ.
SCROLL FOR NEXT