ನವದೆಹಲಿ: ಅಯೋಧ್ಯೆ ರಾಮ ಮಂದಿರ ವಿವಾದ ಕುರಿತು ನ್ಯಾಯಾಲಯದ ಆದೇಶಕ್ಕಾಗಿ ಹಿಂದೂಗಳು ಶಾಶ್ವತವಾಗಿ ಕಾಯಲು ಸಾಧ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಬುಧವಾರ ಹೇಳಿದೆ.
ರಾಮ ಮಂದಿರ ವಿವಾದ ಕುರಿತಂತೆ ಈ ಹಿಂದೆ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿಯವರು, ನ್ಯಾಯಾಲಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವೇ ರಾಮ ಮಂದಿರ ನಿರ್ಮಾಣ ಕುರಿತ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಹೆಚ್'ಪಿ ಅಂತರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಅವರು, ಪ್ರಸ್ತುತ ಇರುವ ಎಲ್ಲಾ ರೀತಿಯ ಪರಿಸ್ಥಿತಿಗಳು ಹಾಗೂ ಹಿಂದೂಗಳ ದೃಷ್ಟಿಕೋನವನ್ನು ಪರಿಗಣಿಸಿದರೆ, ಮಂದಿರ ನಿರ್ಮಾಣ ಕುರಿತು ನ್ಯಾಯಾಲಯದ ಆದೇಶಕ್ಕಾಗಿ ಶಾಶ್ವತವಾಗಿ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಇರುವ ಒಂದೇ ಒಂದು ಸೂಕ್ತ ಮಾರ್ಗವೆಂದರೆ ಸುಗ್ರೀವಾಜ್ಞೆ ಹೊರಡಿಸುವುದು ಎಂದು ತಿಳಿಸಿದ್ದಾರೆ.