ದೇಶ

ಭಕ್ತರ ಭದ್ರತೆ ಮಾತ್ರ ಪೊಲೀಸರ ಹೊಣೆ, ಅವರ ವಯಸ್ಸಿನ ಪರಿಶೀಲನೆ ನಮ್ಮ ಜವಾಬ್ದಾರಿಯಲ್ಲ: ಕೇರಳ ಡಿಜಿಪಿ

Srinivasamurthy VN
ಕೊಚ್ಚಿ: ಶಬರಿಮಲೆಗೆ ಆಗಮಿಸುವ ಭಕ್ತರ ಭದ್ರತೆ ಮಾತ್ರ ಪೊಲೀಸರ ಹೊಣೆ, ಅವರ ವಯಸ್ಸಿನ ಪರಿಶೀಲನೆ ನಮ್ಮ ಜವಾಬ್ದಾರಿಯಲ್ಲ ಎಂದು ಕೇರಳ ಡಿಜಿಪಿ ಲೋಕನಾಥ್ ಬೆಹೆರಾ ಹೇಳಿದ್ದಾರೆ.
ಖ್ಯಾತ ಧಾರ್ಮಿಕ ತಾಣ ಶಬರಿಮಲೆಯಲ್ಲಿ ಮಹಿಳೆಯರು ಪ್ರವೇಶ ಮಾಡಿ ಅಯ್ಯಪ್ಪ ದರ್ಶನ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ಡಿಜಿಪಿ ಲೋಕನಾಥ್ ಬೆಹೆರಾ ಅವರು, ಶಬರಿಮಲೆಯಲ್ಲಿ ಎಲ್ಲ ರೀತಿಯ ಭದ್ರತೆ ನಿಯೋಜನೆ ಮಾಡಲಾಗಿದೆ. ಭದ್ರತೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಾಗಿಲ್ಲ. ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಭದ್ರತೆ ನೀಡುವುದು ನಮ್ಮ ಜವಾಬ್ದಾರಿ.. ಆದರೆ ಭಕ್ತರ ವಯಸ್ಸಿನ ಪರಿಶೀಲನೆ ನಮ್ಮ ಹೊಣೆಯಲ್ಲ ಎಂದು ಹೇಳಿದ್ದಾರೆ.
ಇನ್ನು ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದ ಬೆನ್ನಲ್ಲೇ ಶಬರಿಮಲೆ ಗಿರಿಯಾದ್ಯಂತ ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯ ಪ್ರವೇಶ ವಿರೋಧಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಶಂಕೆ ಮೇರೆಗೆ ಶಬರಿಮಲೆಯಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನುಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿದುಬಂದಿದೆ.
SCROLL FOR NEXT