ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪ್ರಧಾನಿ ಮೋದಿ ಕುರಿತು ಟ್ರಂಪ್ ಹೇಳಿಕೆ ತಳ್ಳಿಹಾಕಿದ ಭಾರತ

ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದಿಂದ ನಾಶವಾಗಿರುವ ಅಪ್ಘಾನಿಸ್ತಾನದಲ್ಲಿ ಅತ್ಯಾಧುನಿಕ ಗ್ರಂಥಾಲಯ.....

ಮೋದಿ - ಟ್ರಂಪ್
Lingaraj Badiger
Updated On : 3 Jan 2019, 6:08 am
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದಿಂದ ನಾಶವಾಗಿರುವ ಅಪ್ಘಾನಿಸ್ತಾನದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದರಿಂದ ಯಾವುದೇ ಪ್ರಯೋಜನವಾಗದು ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.
ಅಭಿವೃದ್ಧಿಗೆ ನೆರವು ನೀಡುವ ಮೂಲಕ ಅಫ್ಘಾನಿಸ್ತಾನವನ್ನು ಪರಿವರ್ತಿಸಬಹುದು. ನಾವು ಅಲ್ಲಿನ ಮೂಲಭೂತ ಸೌಕರ್ಯಗಳ ಯೋಜನೆಗೆ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆಗಳಿಗೂ ನೆರವು ನೀಡುತ್ತಿದ್ದೇವೆ. ಇದರಿಂದ ಆ ದೇಶ ಆರ್ಥಿಕವಾಗಿ ಸದೃಢವಾಗಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಅಫ್ಘಾನಿಸ್ತಾನಕ್ಕೆ ಭಾರತದ ನೆರವಿನ ಪ್ರಸ್ತಾಪ ಮಾಡಿದ ಟ್ರಂಪ್, ಸಾಗರೋತ್ತರ ದೇಶಗಳಲ್ಲಿ ಕಡಿಮೆ ಹೂಡಿಕೆ ಮಾಡುವ ಅಮೆರಿಕದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

Advertisement

Advertisement

ಮೋದಿ ನನ್ನ ಜತೆಗಿದ್ದಾಗ, ಅಪ್ಘಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಿಸುವ ಬಗ್ಗೆ ಸತತವಾಗಿ ಹೇಳುತ್ತಿದ್ದರು. ಬಹುಶಃ ಇದಕ್ಕೆ ನಾವು ಕೃತಜ್ಞತೆ ಹೇಳಬೇಕು. ಆದರೆ ಅಪ್ಘಾನಿಸ್ತಾನದಲ್ಲಿ ಇದನ್ನು ಯಾರು ಬಳಸುತ್ತಾರೆ ಎಂದು ಟ್ರಂಪ್ ವ್ಯಂಗ್ಯವಾಡಿದ್ದರು. 
2001ರ ಸೆಪ್ಟೆಂಬರ್ 11ರ ದಾಳಿ ಘಟನೆ ಬಳಿಕ ಅಮೆರಿಕನ್ ಮಿತ್ರಪಡೆ ತಾಲಿಬಾನ್ ಸರ್ಕಾರವನ್ನು ಕಿತ್ತೊಗೆದ ಬಳಿಕ ಭಾರತ ಅಪ್ಘಾನಿಸ್ತಾನಕ್ಕೆ 300 ಕೋಟಿ ಡಾಲರ್ ನೆರವು ನೀಡಲು ಮುಂದಾಗಿದ್ದು, ಇದಕ್ಕೆ ತಾನು ಬದ್ಧ ಎಂದು ಭಾರತ ಸ್ಪಷ್ಟಪಡಿಸಿತ್ತು.
ಈ ಯೋಜನೆಯಡಿ ಕಾಬೂಲ್‍ನಲ್ಲಿ ಉತ್ತಮ ಹೈಸ್ಕೂಲ್ ನಿರ್ಮಾಣ ಮತ್ತು ಪ್ರತಿ ವರ್ಷ 100 ಅಪ್ಘಾನ್ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಉದ್ದೇಶಿಸಲಾಗಿತ್ತು. 2015ರಲ್ಲಿ ಭಾರತದ ನೆರವಿನಡಿ ನಿರ್ಮಿಸಿದ ಅಪ್ಘಾನ್ ಪಾರ್ಲಿಮೆಂಟ್ ಕಟ್ಟಡ ಉದ್ಘಾಟಿಸುವ ವೇಳೆ ಮೋದಿ, ಅಫ್ಘಾನ್ ಯುವಕರಿಗೆ ಅತ್ಯಾಧುನಿಕ ಶಿಕ್ಷಣ ಹಾಗೂ ವೃತ್ತಿಪರ ಕೌಶಲ ಒದಗಿಸುವ ಮೂಲಕ ಸಬಲೀಕರಿಸಲು ಭಾರತ ನೆರವಾಗಲಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement