ದೇಶ

ಶಬರಿಮಲೆ ಪ್ರವೇಶ: ಕೊಡಗಿನಲ್ಲಿ ಕುಳಿತು ಪ್ಲಾನ್ ಮಾಡಿದ್ರಾ ಬಿಂದು, ಕನಕ ದುರ್ಗಾ? ಇಲ್ಲಿದೆ ಶಾಕಿಂಗ್ ಸುದ್ದಿ!

Vishwanath S
ಬೆಂಗಳೂರು: ಕಲಿಯುಗ ವರದ ಶ್ರೀ ಶಬರಿಮಲೆ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಸ್ವಾಮಿ ದರ್ಶನ ಪಡೆಯುವ ಮೂಲಕ 800 ವರ್ಷಗಳ ಸಂಪ್ರದಾಯವನ್ನು ಮುರಿದಿದ್ದ ಬಿಂದು ಮತ್ತು ಕನಕದುರ್ಗಾ ದೇಗುಲ ಪ್ರವೇಶಕ್ಕೂ ಮುನ್ನ ಕೊಡಗಿನಲ್ಲಿ ಕುಳಿತು ಪ್ಲಾನ್ ಮಾಡಿದ್ದರಾ ಎಂಬ ಶಂಕೆ ವ್ಯಕ್ತವಾಗಿದೆ.
ಹೌದು, ಜನವರಿ 2ರಂದು ಬೆಳಗ್ಗೆ ಬಿಂದು ಹಾಗೂ ಕನಕ ದುರ್ಗಾ ಇಬ್ಬರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಅಂದರೆ, ಡಿ.29ರಂದು ಇಬ್ಬರೂ ವಿರಾಜ್ ಪೇಟೆಯ ದೊಡ್ಡ ಚೌಕಿ ಸಮೀಪದ ಸೀತಾಲಕ್ಷ್ಮಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು ಎನ್ನುವ ವಿಚಾರ ಈಗ ಬಹಿರಂಗವಾಗಿದೆ.
ಡಿ.29ರಂದು ಮಧ್ಯಾಹ್ನ 2.12ಕ್ಕೆ ಬಿಂದು ಹಾಗೂ ಕನಕ ದುರ್ಗಾ ಲಾಡ್ಜ್ ಗೆ ಚೆಕ್ ಇನ್ ಆಗಿದ್ದರು. ನಂತರ ಎರಡು ದಿನಗಳ ಕಾಲ ಕೊಡುಗು ವೀಕ್ಷಣೆಯಲ್ಲಿ ತೊಡಗಿದ್ದರು. ಇವರ ಫೋಟೋಗಳು ಟಿವಿ, ಪೇಪರ್ ಗಳಲ್ಲಿ ಬರುತ್ತಿದ್ದಂತೆ ಸ್ಥಳೀಯರಿಗೆ ಇವರ ಗುರುತು ಸಿಕ್ಕಿದೆ. 
ಇನ್ನು ನಮ್ಮ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಮಹಿಳೆಯರು ಸಾಮಾನ್ಯ ಉಡುಗೆಯನ್ನೇ ತೊಟ್ಟಿದ್ದರು. ಅವರು ಯಾವುದೇ ಮಾಲೆ ಧರಿಸಿರಲಿಲ್ಲ ಅಥವಾ ಸಂಪ್ರದಾಯಿಕ ಬಟ್ಟೆ ಹಾಕಿರಲಿಲ್ಲ ಎಂದು ಲಾಡ್ಜ್ ನ ಸಿಬ್ಬಂದಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಸುದ್ದಿ ಇದೀಗ ಕೇರಳದಲ್ಲಿ ವ್ಯಾಪಕವಾಗಿ ಹರಡಿದ್ದು ಭಕ್ತರು ಹಾಗೂ ಸ್ಥಳೀಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
SCROLL FOR NEXT