ದೇಶ

ಕೇಂದ್ರ ಸರ್ಕಾರದಿಂದ ಎಚ್‌ಎಎಲ್‌, ಒಎನ್‌ಜಿಸಿ ಆಸ್ತಿ ದುರ್ಬಳಕೆ: ಅಹ್ಮದ್ ಪಟೇಲ್

Lingaraj Badiger
ನವದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಉದ್ದಿಮೆಗಳಾದ ಎಚ್‌ಎಎಲ್‌ ಮತ್ತು ಒಎನ್‌ಜಿಸಿ ಸೊತ್ತುಗಳನ್ನು ಕೆಲವೇ ಕೆಲವು ವ್ಯಕ್ತಿಗಳಿಗೆ ಲಾಭವಾಗುವ ರೀತಿಯಲ್ಲಿ ಬೇಕಾಬಿಟ್ಟಿ  ಪೋಲು ಮಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ ಅವರು ಶನಿವಾರ ಆರೋಪಿಸಿದ್ದಾರೆ.
ಎಚ್‌ಎಎಲ್‌ ತನ್ನ ನೌಕರರಿಗೆ ತಿಂಗಳ ಸಂಬಳ ನೀಡಲು ಸಾಧ್ಯವಾಗದೆ ಅದಕ್ಕಾಗಿ 1,000 ಕೋಟಿ ರು. ಸಾಲ ಪಡೆಯುತ್ತಿದೆ ಎಂದು ಅಹ್ಮದ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ. 
ಎಚ್‌ಎಎಲ್‌ ಮಾತ್ರವಲ್ಲ, ಒಎನ್‌ಜಿಸಿ, ಎಲ್‌ಐಸಿ, ಎಚ್‌ಪಿಸಿಎಲ್‌, ಜಿಎಸ್‌ಪಿಸಿ ಅಥವಾ ಬೇರೆ ಯಾವುದೇ ಸಾರ್ವಜನಿಕ ಉದ್ದಿಮೆಗಳ ಆಸ್ತಿಪಾಸ್ತಿಗಳನ್ನು ಮೋದಿ ಸರ್ಕಾರ ಕೆಲವೇ ಕೆಲವರಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ಪೋಲು ಮಾಡುತ್ತಿದೆ ಎಂದು ಪಟೇಲ್‌ ದೂರಿದ್ದಾರೆ.
ಎಚ್ಎಎಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತನ್ನ ನೌಕರರಿಗೆ ಸಂಬಳ ನೀಡಲು 1 ಸಾವಿರ ಕೋಟಿ ರುಪಾಯಿ ಸಾಲ ಪಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಹಿನ್ನಲೆಯಲ್ಲಿ ಅಹ್ಮದ್ ಪಟೇಲ್ ಈ ಆರೋಪ ಮಾಡಿದ್ದಾರೆ.
SCROLL FOR NEXT