ದೇಶ

ಐಎಸ್ ಸಿದ್ಧಾಂತಗಳಿಗೆ ಪ್ರೇರಣೆಗೊಳಗಾಗದಿರಿ: ಕಾಶ್ಮೀರದ ಯುವಕರಿಗೆ ಪ್ರತ್ಯೇಕತಾವಾದಿಗಳು

Manjula VN
ಶ್ರೀನಗರ: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಸಿದ್ಧಾಂತಗಳಿಗೆ ಪ್ರೇರಣೆಗೊಳಗಾಗದಿರಿ ಎಂದು ಕಾಶ್ಮೀರ ಯುವಕರಿಗೆ ಪ್ರತ್ಯೇಕತಾವಾದಿಗಳ ನಾಯಕರು ಶುಕ್ರವಾರ ಕರೆ ನೀಡಿದ್ದಾರೆ. 
ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿರುವ ಪ್ರತ್ಯೇಕತವಾದಿಗಳ ನಾಯಕರಾರ ಮಿರ್ವೈಜ್ ಉಮರ್ ಫಾರೂಖ್, ಮೊಹಮ್ಮದ್ ಯಾಸಿನ್ ಮಲಿಕ್ ಮತ್ತು ಇತರೆ ಪ್ರಮುಖ ಪ್ರತ್ಯೇಕತವಾದಿಗ ನಾಯಕರು, ಐಎಸ್ ಸಿದ್ಧಾತಂಗಳಿಗೆ ಪ್ರೇರಣೆಗೊಳಗಾಗದಿರಿ ಎಂದು ಹೇಳಿದ್ದಾರೆ.
ಹೈದರ್ಪೋರಾದಲ್ಲಿ ಗೃಹ ಬಂಧನದಲ್ಲಿರುವ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಗಿಲಾನಿಯವರೂ ಕೂಡ ದೂರವಾಣಿ ಕರೆ ಮೂಲಕ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗಿಲಾನಿ, ಮಿರ್ವೈಜ್ ಹಾಗೂ ಮಲಿಕ್ ಮೂವರು ಪ್ರಮುಖ ನಾಯಕರೂ ಐಎಸ್ ಸಿದ್ಧಾಂತಗಳಿಗೆ ಪ್ರೇರಣೆಗೊಳಗಾಗದಂತೆ ಯುವಕರಿಗೆ ಕರೆ ನೀಡಿದ್ದಾರೆ. 
ಜನರು ಜಾಗರೂಕರಾಗಿರಬೇಕಿದೆ. ಕೆಲವರು ಕಾಶ್ಮೀರವನ್ನು ಜಾಗತಿಕ ಕಾರ್ಯಸೂಚಿಯೊಂದಿಗೆ ಸಂಪರ್ಕಿಸುವ ಮೂಲಕ ಕಾಶ್ಮೀರಕ್ಕೆ ಜಾಗತಿಕ ಬಣ್ಣ ನೀಡಲು ಯತ್ನ ನಡೆಸುತ್ತಿದ್ದಾರೆ. ಇಂತಹ ಯತ್ನಗಳಿಗೆ ನಾವು ಅವಕಾಶ ನೀಡಬಾರದು. ಭಾವನಾತ್ಮಕವಾಗಿ ಯಾವುದೇ ಸಿದ್ಧಾಂತಗಳಿಗೂ ಪ್ರೇರಣೆಗೊಳಗಾಗದಿರಿ. ಕಾಶ್ಮೀರ ಕುರಿತು ಯುವಕರು ಹೆಚ್ಚಿನ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆಂಬುದು ನಮಗೂ ಗೊತ್ತಿದೆ. ಯುವಕರ ಮಾತುಗಳನ್ನು ಕೇಳಲು ನಾವು ಸಿದ್ಧರಿದ್ದೇವೆ. ನಮ್ಮ ಹೋರಾಟವನ್ನು ಯಾವ ರೀತಿ ಮುಂದಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದರ ಕುರಿತು ಯುವಕರಿಂದ ಸಲಹೆ ಪಡೆಯಲು ನಾವು ಬಯಸಿದ್ದೇವೆ. ಪರಿಹಾರ ಹಾಗೂ ಸಲಹೆ ಸೂಚಿಸಲು ಇಚ್ಛಿಸುವ ಯುವಕರು ನಮ್ಮ ಬಳಿಗೆ ಬನ್ನಿ ಎಂದು ತಿಳಿಸಿದ್ದಾರೆ. 
SCROLL FOR NEXT