ದೇಶ

ಶುದ್ಧೀಕರಣ ಶಾಸ್ತ್ರ ಮಾಡಿದ ಶಬರಿಮಲೆ ತಂತ್ರಿ 'ಬ್ರಾಹ್ಮಣ ರಾಕ್ಷಸ': ಕೇರಳ ಸಚಿವ

Nagaraja AB
ಕೊಚ್ಚಿ:   ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ ಬಳಿಕ ಶುದ್ಧೀಕರಣ ಶಾಸ್ತ್ರ ಮಾಡಿದ ದೇವಾಲಯದ  ತಂತ್ರಿ 'ಬ್ರಾಹ್ಮಣ ರಾಕ್ಷಸ' ಎಂದು  ಕೇರಳದ ಹಿರಿಯ  ಸಚಿವರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬುಧವಾರ ಕನಕದುರ್ಗಾ (44) ಹಾಗೂ ಬಿಂದು (42)  ಅಯ್ಯಪ್ಪ ದರ್ಶನ ಪಡೆಯುವ ಮೂಲಕ ಶತಮಾನಗಳಷ್ಟು ಕಾಲದ ಸಂಪ್ರದಾಯವನ್ನು ಮುರಿದು ಇತಿಹಾಸ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ತಂತ್ರಿ ಕಂಡಾರು ರಾಜೀವರು , ಗರ್ಭಗುಡಿಯನ್ನು ಮುಚ್ಚಿ ಶುದ್ದೀಕರಣ ಶಾಸ್ತ್ರ ಮಾಡಿದ್ದರು.
ಸಹೋದರಿಯನ್ನು ಅಪವಿತ್ರ ಎನ್ನುವವರನ್ನು ಮನುಷ್ಯರು ಎಂದು ಪರಿಗಣಿಸಬಹುದೆ ಎಂದು ಕೇರಳ  ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಸಿಪಿಐ (ಎಂ) ಹಿರಿಯ ಮುಖಂಡ ಜಿ. ಸುಧಾಕರನ್ ಕಿಡಿಕಾರಿದ್ದಾರೆ.
ಅಯ್ಯಪ್ಪ ದೇಗುಲದ ತಂತ್ರಿ ಬ್ರಾಹ್ಮಣರಲ್ಲ.  ಜಾತಿ ಸ್ವರೂಪದ ರಾಕ್ಷಸನಂತಿದ್ದಾರೆ. ಒಂದು ವೇಳೆ ಬ್ರಾಹ್ಮಣ ರಾಕ್ಷಸನಂತಾದರೆ ಅವರು ಉಗ್ರರಾಗುತ್ತಾರೆ ಎಂದು ಸುದ್ದಿಗಾರರಿಗೆ ಅವರು ಹೇಳಿದ್ದಾರೆ.
ತಂತ್ರಿ ಶುದ್ಧ ಬ್ರಾಹ್ಮಣನಲ್ಲ. ಅವರಿಗೆ ಅಯ್ಯಪ್ಪನ ಮೇಲೆ ಯಾವುದೇ ಪ್ರೀತಿ, ಗೌರವ ಇಲ್ಲ ಎಂದು ಸುಧಾಕರನ್  ಆರೋಪಿಸಿದ್ದಾರೆ.
SCROLL FOR NEXT