ದೇಶ

ಶಬರಿಮಲೆ ಆಯ್ತು ಈಗ ಪುರುಷರಿಗೆ ಮಾತ್ರ ಪ್ರವೇಶ ಇರುವ ಅಗಸ್ತ್ಯಕೂಡಂ ಶಿಖರದ ಸರದಿ!

Srinivas Rao BV
ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ವಯಸ್ಸಿನ ಮಿತಿ ಇಲ್ಲದೇ ಎಲ್ಲಾ ಮಹಿಳೆಯರಿಗೂ ಪ್ರವೇಶ ಮಾಡುವ ಅವಕಾಶ ಸಿಕ್ಕಿರುವ  ಮಾದರಿಯಲ್ಲಿ ಕೇರಳದ ಮತ್ತೊಂದು ಪುರುಷರಿಗೆ ಮಾತ್ರ ಪ್ರವೇಶವಿರುವ ಅಗಸ್ತ್ಯಕೂಡಂ ಶಿಖರಕ್ಕೆ ಮಹಿಳೆಯರು ಪ್ರವೇಶಿಸುವುದಕ್ಕೆ ಸಿದ್ಧತೆ ನಡೆದಿದೆ. 
ಸುಪ್ರೀಂ ಕೋರ್ಟ್ ಶಬರಿಮಲೆ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ತೀರ್ಪು ಪ್ರಕಟಿಸಿರುವ ಮಾದರಿಯಲ್ಲೇ ಕೇರಳ ಹೈಕೋರ್ಟ್ ಅಗಸ್ತ್ಯಕೂಡಂ ಶಿಖರಕ್ಕೂ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ತೀರ್ಪು ಪ್ರಕಟಿಸಿತ್ತು. 
ಈಗ ಜ.14 ರಿಂದ ಅಗಸ್ತ್ಯಕೂಡಂ ಶಿಖರಕ್ಕೆ 41 ದಿನಗಳ ಟ್ರೆಕ್ಕಿಂಗ್ ಪ್ರಾರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರೂ ಸಹ ಅಲ್ಲಿಗೆ ತೆರಳಲಿದ್ದಾರೆ. ಈ ವರೆಗೆ ಮಹಿಳೆಯರ ಪ್ರವೇಶವನ್ನು ಇಲ್ಲಿಗೆ ನಿರ್ಬಂಧಿಸಲಾಗಿತ್ತು. ಸುಮಾರು 1,868 ಮೀಟರ್ ಉತ್ತುಂಗವಿರುವ ಅಗಸ್ತ್ಯ ಶಿಖರ ತಿರುವನಂತಪುರಂ ಜಿಲ್ಲೆಯ  ನೆಯ್ಯರ್ ವನ್ಯಜೀವಿ ಧಾಮದ ವ್ಯಾಪ್ತಿಗೆ ಬರುತ್ತದೆ. 2018 ರ ನವೆಂಬರ್ ತಿಂಗಳಲ್ಲಿ ಕೇರಳ ಹೈಕೋರ್ಟ್ ಅಗಸ್ತ್ಯಕೂಡಂ ಶಿಖರಕ್ಕೂ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ತೀರ್ಪು ಪ್ರಕಟಿಸಿತ್ತು. 
ಅಗಸ್ತ್ಯಕೂಡಂ ಶಿಖರಕ್ಕೆ ತೆರಳಲು ಅನುಮತಿ ನೀಡಬೇಕೆಂದು ಎರಡು ಮಹಿಳಾ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. 
SCROLL FOR NEXT