ಕಚ್ಚೋಕೆ ಬಂದ ನಾಯಿಗೆ ಕಲ್ಲೆಸೆದ ವ್ಯಕ್ತಿ ಗುಂಡೇಟಿಗೆ ಬಲಿ! 
ದೇಶ

ಕಚ್ಚೋಕೆ ಬಂದ ನಾಯಿಗೆ ಕಲ್ಲೆಸೆದ ವ್ಯಕ್ತಿ ಗುಂಡೇಟಿಗೆ ಬಲಿ!

ತನ್ನನ್ನು ಕಚ್ಚಲು ಬಂದ ನಾಯಿಗೆ ಕಲ್ಲೆಸಿದ್ದಕ್ಕೆ ಆ ನಾಯಿಯ ಮಾಲೀಕನಿಂದ ಗುಂಡೇಟು ತಿಂದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.

ನವದೆಹಲಿ: ತನ್ನನ್ನು ಕಚ್ಚಲು ಬಂದ ನಾಯಿಗೆ ಕಲ್ಲೆಸಿದ್ದಕ್ಕೆ ಆ ನಾಯಿಯ ಮಾಲೀಕನಿಂದ ಗುಂಡೇಟು ತಿಂದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಈ ಘಟನೆ ಪಶ್ಚಿಮ ದೆಹಲಿಯ ವೆಲ್‍ಕಂ ಕಾಲೋನಿಯಲ್ಲಿ ನಡೆದಿದ್ದು  ಅಫಾಖ್(30)  ಎಂಬ ವ್ಯಕ್ತಿ ದುರಂತ ಸಾವಿಗೀಡಾಗಿದ್ದಾನೆ.
ಅಫಾಖ್ ಮುಂಜಾನೆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಅವನನ್ನು ಕಂಡ ನಾಯಿ ಬೊಗಳಿತ್ತು, ಅಲ್ಲದೆ ಕಚ್ಚಲು ಸಹ ಪ್ರಯತ್ನಿಸಿದೆ. ಇದರಿಂದ ಕುಪಿತನಾದ ಆತ ಹತ್ತಿರದಲ್ಲೇ ಬಿದ್ದಿದ್ದ ಕಲ್ಲನ್ನು ನಾಯಿಯತ್ತ ಎಸೆದಿದ್ದಾನೆ. ಇದನ್ನು ಆ ನಾಯಿಯ ಮಾಲೀಕ ಮೆಹ್ತಾಬ್ ಗಮನಿಸಿದ್ದಾನೆ.
ತನ್ನ ನಾಯಿಗೆ ಕಲ್ಲು ಹೊಡೆದಿದ್ದ ಆ ವ್ಯಕ್ತಿಯನ್ನು ಕಂಡು ಆಕ್ರೋಶಗೊಂಡ ಮೆಹ್ತಾಬ್ ಮನೆಯಲ್ಲಿದ್ದ ಪಿಸ್ತೂಲ್ ತಂದು ಅಫಾಖ್ ಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ.ಇದಕ್ಕೆ ಮುನ್ನ ಇಬ್ಬರ ನಡುವೆ ಮಾತಿನ ಚಕಮಕಿ ನಡೆಇದೆ ಎನ್ನಲಾಗಿದ್ದು ಗುಂಡೇಟು ತಿಂದ ಅಫಾಖ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲನೀಡದ ಕಾರಣ ಆತ ಮರಣಿಸಿದ್ದಾನೆ.
ಇದೀಗ ಗುಂಡಿನ ದಾಳಿ ನಡೆಸಿದ್ದ ನಾಯಿ ಮಾಲೀಕ ಮೆಹ್ತಾಬ್ ನಾಪತ್ತೆಯಾಗಿದ್ದು ಪೋಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?