ದೇಶ

ಭಯೋತ್ಪಾದನೆ ಪಿಡುಗು 'ರಾಕ್ಷಸ'ನಂತೆ ತಲೆಯೆತ್ತುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Manjula VN
ನವದೆಹಲಿ: ಭಯೋತ್ಪಾದನೆ ಎಂಬ ಪಿಡುಗು ಬಹುತಲೆಯ ದೈತ್ಯದಂತೆ ಹರಡುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ. 
ರಾಜಧಾನಿ ದೆಹಲಿಯಲ್ಲಿ ನಡೆದ ರೈಸಿನಾ ಡಯಲಾಗ್ ನ ಚರ್ಚಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕೆಲ ರಾಷ್ಟ್ರಗಳು ತಮ್ಮ ಸರ್ಕಾರದ ನೀತಿ ಎಂಬಂತೆ ಭಯೋತ್ಪಾದನೆ ಬೆಂಬಲಿಸುವುದನ್ನು ನಿಲ್ಲಿಸುವ ತನಕ ಉಗ್ರವಾದವನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದಜು ಹೇಳಿದ್ದಾರೆ. 
ಭಯೋತ್ಪಾದನೆ ಹೊಸರೂಪದ ಸಮರವಾಗಿ ಪರಿವರ್ತಿತವಾಗುತ್ತಿದೆ. ಇದರ ಪರಿಣಾಮ ಭಯೋತ್ಪಾದನೆ ಪಿಡುಗು ಬಹುತಲೆಯ ದೈತ್ಯಾಕಾರದಂತೆ ಹರಡುತ್ತಿದೆ. ಕೆಲ ರಾಷ್ಟ್ರಗಳು ತಮ್ಮ ರಾಷ್ಟ್ರದ ನೀತಿಯೆಂಬಂತೆ ಭಯೋತ್ಪಾದನೆ ಬೆಂಬಲಿಸುವುದನ್ನು ನಿಲ್ಲಿಸುವವರೆಗೂ ಈ ಪಿಡುಗು ತೊಲಗುವುದಿಲ್ಲ ಎಂದು ತಿಳಿಸಿದ್ದಾರೆ. 
ಪಾಕಿಸ್ತಾನ ಸದಾಕಾಲ ತಾಲಿಬಾನ್ ಉಗ್ರ ಸಂಘಟನೆಯನ್ನು ತನ್ನ ಹಿಂಬದಿಯಲ್ಲೇ ಇಟ್ಟುಕೊಂಡಿದ್ದು, ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಭಾರತದ ವಿವಿಧ ರೀತಿಯ ಮೂಲಭೂತೀಕರಣಕ್ಕೆ ಸಾಕ್ಷಿಯಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಯುವತರು ತಪ್ಪು ಮಾಹಿತಿಗಳಿಂದ ಮೂಲಭೂತೀಕರಣಕ್ಕೊಳಗಾಗುತ್ತಿದ್ದಾರೆ. 
ಮೂಲಭೂತೀಕರಣ ಹರಡಲು ಸಾಮಾಜಿಕ ಜಾಲತಾಣಗಳು ಪ್ರಮುಖ ಮೂಲವಾಗಿ ಪರಿಣಮಿಸಿವೆ. ಸಾಮಾಜಿಕ ಜಾಲತಾಣಗಳಿಂದ ತಪ್ಪು ಮಾಹಿತಿಗಳು ರವಾನೆಯಾಗುತ್ತಿರುವುದು ಹೆಚ್ಚುತ್ತಿದ್ದು. ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದಿದ್ದಾರೆ. 
SCROLL FOR NEXT