ದೇಶ

ಉದ್ಯೋಗಗಳು ಏಲ್ಲಿವೆ? ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಬಗ್ಗೆ ಶಿವಸೇನೆ ಪ್ರಶ್ನೆ

Nagaraja AB
ಮುಂಬೈ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಮಾರನೇ ದಿನವೇ  ಉದ್ಯೋಗಗಳು ಏಲ್ಲಿವೆ ಎಂದು ಎನ್ ಡಿಎ ಅಂಗಪಕ್ಷ ಶಿವಸೇನೆ ಪ್ರಶ್ನಿಸಿದೆ.
ಅಲ್ಲದೇ ಇದು ಕೇವಲ ಮುಂಬರುವ ಲೋಕಸಭಾ  ಚುನಾವಣೆ ದೃಷ್ಟಿಯಲ್ಲಿಬಾರದು, ಹಾಗೇನಾದರೂ ಆದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ದೇಶದಲ್ಲಿ ಉದ್ಯೋಗ ಪ್ರಮಾಣವನ್ನು ಸಮಪ್ರಮಾಣದಲ್ಲಿ ಕೊಂಡೊಯ್ಯಲು  ಪ್ರತಿವರ್ಷ 80 ರಿಂದ 90 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಆದರೆ. ಇಂದಿನ ಪರಿಸ್ಥಿತಿಯಲ್ಲಿ ಆ ಲೆಕ್ಕಾಚಾರವೂ ಸುರಕ್ಷಿತವಾಗಿಲ್ಲ ಎಂದು ಉದ್ದವ್ ಠಾಕ್ರೆ ತಿಳಿಸಿದ್ದಾರೆ.
SCROLL FOR NEXT