ಸಂಗ್ರಹ ಚಿತ್ರ 
ದೇಶ

ಹೆರಿಗೆ ಸಮಯದಲ್ಲಿ ಪುರುಷ ನರ್ಸ್ ನಿರ್ಲಕ್ಷ್ಯ: ಎರಡು ತುಂಡಾದ ಮಗು, ಗರ್ಭದಲ್ಲೇ ಉಳಿಯಿತು ಶಿಶುವಿನ ತಲೆ!

ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಿದ್ದ ಪುರುಷ ನರ್ಸ್ ಒಬ್ಬ ತನ್ನ ನಿರ್ಲಕ್ಷ್ದ ಕಾರಣ ಹಸುಗೂಸನ್ನು ಹೊರತೆಗೆವ ಸಮಯದಲ್ಲಿ ಎರಡು ಭಾಗವನ್ನಾಗಿಸಿದ ಆಘಾತಕಾರಿ ಘಟನೆ ರಾಜಸ್ಥಾನದ....

ರಾಮಗಢ(ರಾಜಸ್ಥಾನ): ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಿದ್ದ ಪುರುಷ ನರ್ಸ್ ಒಬ್ಬ ತನ್ನ ನಿರ್ಲಕ್ಷ್ದ ಕಾರಣ ಹಸುಗೂಸನ್ನು ಹೊರತೆಗೆವ ಸಮಯದಲ್ಲಿ ಎರಡು ಭಾಗವನ್ನಾಗಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.  ರಾಮಗಢ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುವ ಓರ್ವ ಪುರುಷ ನರ್ಸ್ ಈ ಕೃತ್ಯ ಎಸಗಿದ್ದಾನೆ.
ಘಟನೆ ನಂತರ ತಾಯಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದಾಳೆ ಎನ್ನಲಾಗಿದೆ.
ವಿಷಯವೆಂದರೆ ಹೆರಿಗೆಯ ಸಮಯದಲ್ಲಿ ತಾಯಿಯ ಗರ್ಭದಿಂದ ಹಸುಗೂಸನ್ನು ಹೊರತೆಗೆವಾಗ ದಿವ್ಯ ನಿರ್ಲಕ್ಷ ತೋರಿದ ನರ್ಸ್ ಭ್ರೂಣವನ್ನು ಜೋರಾಗಿ ಎಳೆದಿದ್ದಾನೆ. ಆ ವೇಳೆ ಮಗು ಎರಡು ತುಂಡಾಗಿ ಹೊರಬಂದಿದೆ. ಇದರ ತರುವಾಯ ನರ್ಸ್ ಹಾಗೂ ಅವನ ಸಹೋದ್ಯೋಗಿಗಳು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದು ಹೆಚ್ಚುವರಿ ಚಿಕಿತ್ಸೆಗಾಗಿ ಗರ್ಭಿಣಿ ತಾಯಿಯನ್ನು  ಜೈಸಲ್ಮೇರ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ ಮಹಿಳೆಯ ಹೆರಿಗೆ ವೇಳೆ ಪ್ಲೆಸೆಂಟಾ (ಜರಾಯು ಅಥವಾ ಹೆರಿಗೆಯ ಕಸ)ವನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಡಲಾಗಿದೆ. ಇದಾಗಿ ಡಾ.ರವೀಂದ್ರ ಸಂಖ್ಲಾ ನೇತೃತ್ವದ ತಂಡ ಮಹಿಳೆಯನ್ನು ಪರಿಶೀಲಿಸಲಾಗಿ ಆಕೆಯ ಹೊಟ್ಟೆಯಲ್ಲಿ ಶಿಶುವಿನ ತಲೆ ಭಾಗವಿರುವುದು ಪತ್ತೆಯಾಗಿದೆ. ಈ ಕುರಿತಂತೆ ಅವರು ಗರ್ಭಿಣಿಯ ಸಂಬಂಧಿಗಳಿಗೆ ತಿಳಿಸಿದರು.
ಈ ಸಂಬಂಧ ಮಹಿಳೆಯ ಪತಿ ರಾಮಗಢದ ಆಸ್ಪತ್ರೆಯ ವಿರುದ್ಧ ದೂರು ಸಲ್ಲಿಸಿದ್ದರೂ ಪೋಲೀಸರು ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT