ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳ ವಿವಾಹಕ್ಕೆ ಹೈದರಾಬಾದ್ ಆಸ್ಪತ್ರೆಯೇ ವೇದಿಕೆಯಾಯ್ತು!
ಹೈದರಾಬಾದ್: ಪ್ರೀತಿಗೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಜೋಡಿಯನ್ನು ಆಸ್ಪತ್ರೆಯಲ್ಲಿಯೇ ಒಂದಾಗಿಸಿರುವ ಘಟನೆ ತೆಲಂಗಆಣದ ಧರೂರ್ ಎಂಬಲ್ಲಿ ನಡೆದಿದೆ.
ದೀರ್ಘಕಾಲದಿಂಡ ಪ್ರೀತಿಸುತ್ತಿದ್ದ ರೇಶ್ಮಾ ಹಾಗೂ ನವಾಜ್ ಮನೆಯವರು ವಿರೋಧಿಸಿದ್ದಕ್ಕಾಗಿ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ. ಇಬ್ಬರನ್ನೂ ವಿಕರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಇಬ್ಬರೂ ಪ್ರಾಣಾಪಯಾದಿಂಡ ಪಾರಾಗಿದ್ದು ಮಕ್ಕಳ ಈ ದೃಢ ನಿರ್ಧಾರದಿಂದ ಕುಪಿತರಾದ ಪೋಷಕರು ಅವರಿಗೆ ಆಸ್ಪತ್ರೆಯಲ್ಲಿಯೇ ಮದುವೆ ಮಾಡಿಸಿದ್ದಾರೆ.
19 ವರ್ಷದ ರೇಷ್ಮಾ ಬೇಗಂ ಹಾಗೂ ವಾಜ್ (21) ಪರಸ್ಪರ ಪ್ರೀತಿಸುತ್ತಿದ್ದು ಈ ವಿಚಾರವನ್ನು ಮನೆಯವರಿಗೆ ಸಹ ತಿಳಿಸಿದ್ದಾರೆ. ಆದರೆ ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಗಿದೆ. ಆಗ ರೇಷ್ಮಾ ಮನೆಯವರು ಆಕೆಗೆ ಬೇರೆ ಗಂಡು ನೋಡಲು ಪ್ರಾರಂಭಿಸಿದ್ದಾರೆ. ಇದನ್ನು ತಿಳಿದ ರೇಷ್ಮಾ ತಾನು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ವಿಕರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆದರೆ ಪ್ರಿಯತಮೆಯ ಆತ್ಮಹತ್ಯೆ ಯತ್ನ ನಡೆಸಿರುವುದು ತಿಳಿದ ನವಾಜ್ ತಾನು ಸಹ ಆಸ್ಪತ್ರೆಗೆ ದಾವಿಸಿದ್ದಲ್ಲದೆ ತಾನೂ ಕೀಟನಾಶಕ ಸೇವಿಸಿ ಸಾಯುವುದಕ್ಕೆ ಯತ್ನಿಸಿದ. ಇದಾಗ ಅವನನ್ನು ಸಹ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಬ್ಬರೂ ಈಗ ಪ್ರಾಣಾಪಾಯದಿಂದ ಪಾರಾಗಿದ್ದು ಸತಿ-ಪತಿಗಳಾಗಿ ಸಂತಸದ ಜೀವನ ನಡೆಸಿದ್ದಾರೆ.