ಪ್ರಯಾಣಿಕರ ಗಮನಕ್ಕೆ: ರೈಲ್ವೆಯಲ್ಲಿ ಇನ್ನು ಮುಂದೆ 30 ನಿಮಿಷಗಳು ಬಾಕಿ ಪ್ರಯಾಣದ ವೇಳೆ ಬ್ಲಾಂಕೆಟ್ ಸಿಗಲ್ಲ! 
ದೇಶ

ಪ್ರಯಾಣಿಕರ ಗಮನಕ್ಕೆ: ರೈಲು ಪ್ರಯಾಣ ಮುಕ್ತಾಯಕ್ಕೆ 30 ನಿಮಿಷ ಮುಂಚೆ ಬ್ಲಾಂಕೆಟ್ ವಾಪಸ್ ಕೊಡಬೇಕು!

ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದ್ದು, ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದ್ದು, ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. 
ಕಳೆದ ವರ್ಷ ಬಿಡುಗಡೆಯಾದ ಅಂಕಿ-ಅಂಶದ ಪ್ರಕಾರ 2017 ರಲ್ಲಿ ದೀರ್ಘಪ್ರಯಾಣದ ರೈಲುಗಳಲ್ಲಿ ಬರೊಬ್ಬರಿ 1.95 ಲಕ್ಷ ಟವಲ್ ಗಳು, 81,736 ಬೆಡ್ ಶೀಟ್ ಗಳು, 55,573 ಪಿಲ್ಲೋ ಕವರ್, 5,038 ಪಿಲ್ಲೋ, 7,043 ಬ್ಲಾಂಕೆಟ್ ಗಳು 200 ಟಾಯ್ಲೆಟ್ ಮಗ್, 1,000 ಟ್ಯಾಪ್ 300 ಫ್ಲಶ್ ಪೈಪ್ ಗಳು ಕಳ್ಳತನವಾಗಿದೆ. 
ಇನ್ನು 2018 ರಲ್ಲಿ 79,350 ಹ್ಯಾಂಡ್ ಟವಲ್ ಗಳು, 27,545 ಬೆಡ್ ಶೀಟ್ ಗಳು, 21,050 ಪಿಲ್ಲೋ ಕವರ್, 2,150 ಪಿಲ್ಲೋಗಳು 2,065 ಬ್ಲಾಂಕೆಟ್ ಗಳು ಕಳ್ಳತನವಾಗಿದ್ದು ಇವುಗಳ ಒಟ್ಟು ಮೊತ್ತ 62 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ರೈಲ್ವೆ ಇಲಾಖೆಯ ಬ್ಲಾಂಕೆಟ್ ಸೇರಿದಂತೆ ಇತರ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು ಇನ್ನು ಮುಂದೆ 30 ನಿಮಿಷಗಳಷ್ಟು ಪ್ರಯಾಣ ಬಾಕಿ ಇರುವಾಗಲೇ ಬ್ಲಾಂಕೆಟ್ ನ್ನು ವಾಪಸ್ ಪಡೆಯುವ ಕ್ರಮ ಅಳವಡಿಸಿಕೊಳ್ಳಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel