ದೇಶ

ಕಾಂಗ್ರೆಸ್ ಅವಧಿಯಲ್ಲಿ ನಿಯಮಗಳನ್ನು ಮೀರಿ ಸಾಲ ನೀಡಲಾಗುತ್ತಿತ್ತು: ಪ್ರಧಾನಿ ಮೋದಿ

Srinivas Rao BV
ನವದೆಹಲಿ: ಸಿಲೆಂಡರ್ ನಮ್ಮ ಸರ್ಕಾರ ಬರುವುದಕ್ಕೆ ಮುನ್ನವೂ ಸಿಗುತ್ತಿತ್ತು, ರೈಲ್ವೆ ನಮ್ಮ ಸರ್ಕಾರ ಬರುವುದಕ್ಕೂ ಮುನ್ನವೂ ನಡೆಯುತ್ತಿತ್ತು, ಪಾಸ್ಪೋರ್ಟ್ ಕೂಡಾ ಸಿಗುತ್ತಿತ್ತು. ವಿದ್ಯುತ್ ಇತ್ತು. ಎಲ್ಲವೂ ಇತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ನಿಧಾನಗತಿಯಲ್ಲಿದ್ದ ಈ ಕ್ಷೇತ್ರಗಳಲ್ಲಿನ ಬದಲಾವಣೆ, ಹೊಸ ವೇಗ ನೀಡಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಜ.12 ರಂದು ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬಿಜೆಪಿ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ "ಈ ಮುಂಚೆಯೂ ಪಾಸ್ಪೋರ್ಟ್, ಸಿಲೆಂಡರ್, ವಿದ್ಯುತ್ ಎಲ್ಲವೂ ಸಿಗುತ್ತಿತ್ತು, ರಸ್ತೆಗಳನ್ನು ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಈ ಎಲ್ಲಾ ಕ್ಷೇತ್ರಗಳಲ್ಲಿನ ಬದಲಾವಣೆಗೆ ಹೊಸ ವೇಗ ನೀಡಲಾಯಿತು ಎಂದು ಹೇಳಿದ್ದಾರೆ. 
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ಪಟೇಲ್ ಅವರು ಪ್ರಧಾನಿಯಾಗಿರುತ್ತಿದ್ದರೆ ಇಂದು ದೇಶದ ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಅಂತೆಯೇ ಅಟಲ್ ಬಿಹಾರಿ ವಾಜಪೇಯಿ ಮತ್ತೊಂದು ಅವಧಿಗೆ ಪ್ರಧಾನಿಯಾಗಿದ್ದಿದ್ದರೆ ಭಾರತ ಇಂದು ಅಭಿವೃದ್ಧಿ ವಿಷಯದಲ್ಲಿ ಮತ್ತೊಂದು ಹಂತ ಮುಂದಿರುತ್ತಿತ್ತು ಈ ಸಂದೇಶವನ್ನು ನಾವು ತಲುಪಿಸಬೇಕಿದೆ ಎಂದು ಮೋದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅವಧಿಯಲ್ಲಿ ನೀಡಲಾದ ಸಾಲದ ಮೊತ್ತದ ಅಂಕಿ-ಅಂಶ ನೀಡಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಅವಧಿಯಲ್ಲಿ ಎರಡು ಲೋನ್ ಪ್ರಕ್ರಿಯೆಗಳಿದ್ದವು, ಒಂದು ಸಾಮಾನ್ಯ ಪ್ರಕ್ರಿಯೆ ಮತ್ತೊಂದು ಕಾಂಗ್ರೆಸ್ ಪ್ರಕ್ರಿಯೆ. ಸಾಮಾನ್ಯ ಲೋನ್ ಪ್ರಕ್ರಿಯೆಯಡಿಯಲ್ಲಿ ಮನೆ, ಶಿಕ್ಷಣಕ್ಕಾಗಿ ಸಾಲ ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಲೋನ್ ಪ್ರಕ್ರಿಯೆಯಡಿಯಲ್ಲಿ ಕಾಂಗ್ರೆಸ್ ಗೆ ಬೇಕಾದವರಿಗೆ ಒಂದು ಫೋನ್ ಕಾಲ್ ನಲ್ಲಿ ಮುಗಿಯುತ್ತಿತ್ತು. ಸಾಮಾನ್ಯ ಲೋನ್ ಪ್ರಕ್ರಿಯೆಯಡಿಯಲ್ಲಿ ಗ್ಯಾರೆಂಟಿ ಕೇಳಲಾಗುತ್ತಿತ್ತು, ಆದರೆ ಕಾಂಗ್ರೆಸ್ ಪ್ರಕ್ರಿಯೆಯಲ್ಲಿ ಏನೂ ಗ್ಯಾರೆಂಟಿ ಕೇಳಲಾಗುತ್ತಿರಲಿಲ್ಲ. ಕೊಟ್ಟ ಹಣವನ್ನು ಕೊಳ್ಳೆಹೊಡೆಯಬಹುದಾಗಿತ್ತು. ಚೌಕಿದಾರ ಯಾವುದೇ ಚೋರರನ್ನೂ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದ್ದಾರೆ. 
SCROLL FOR NEXT