1947 ರ ತಪ್ಪು: ಕರ್ತಾರ್ ಪುರದ ಬಗ್ಗೆ ಮನಮೋಹನ್ ಸಿಂಗ್ ಎದುರೇ ಕಾಂಗ್ರೆಸ್ ಗೆ ಮೋದಿ ತರಾಟೆ
ನವದೆಹಲಿ: ಸಿಖ್ ಸಮುದಾಯದ ಪ್ರಮುಖ ಧಾರ್ಮಿಕ ಪ್ರದೇಶವಾಗಿರುವ ಕರ್ತಾರ್ ಪುರ ಭಾರತದಿಂದ ಕೆಲವೇ ಕಿಮೀ ದೂರದಲ್ಲಿದ್ದರೂ 1947 ರ ಭಾರತ-ಪಾಕ್ ವಿಭಜನೆಯಲ್ಲಿ ಅದನ್ನು ನಿರ್ಲಕ್ಷಿಸಿದ್ದು ತಪ್ಪಾಗಿತ್ತು. ಈಗ ಅದನ್ನು ತಿದ್ದಿಕೊಳ್ಳುವ ನಿಟ್ಟಿನಲ್ಲಿ ಸಿಖ್ ಯಾತ್ರಾರ್ಥಿಗಳಿಗಾಗಿ ಕರ್ತಾರ್ ಪುರ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಜ.13 ರಂದು ಗುರು ಗೋವಿಂದ್ ಸಿಂಗ್ ಅವರ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ ನಾಣ್ಯ ಬಿಡುಗಡೆ ಮಾಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೆದುರೇ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಖ್ ಧರ್ಮಗುರುಗಳು ಸತ್ಯದ ಪರವಾಗಿ ನಿಲ್ಲಬೇಕೆಂದು ಎಂದು ನಮಗೆ ಹೇಳಿಕೊಟ್ಟಿದ್ದಾರೆ. ನಮ್ಮ ಸರ್ಕಾರ 1984 ರಲ್ಲಿ ಅನ್ಯಾಯಕ್ಕೊಳಗಾದ ಸಿಖ್ ಸಮುದಾಯದವರಿಗೆ ನ್ಯಾಯ ಒದಗಿಸಲು ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕರ್ತಾರ್ ಪುರ ಕಾರಿಡಾರ್ ನ್ನು ತಮ್ಮ ಸರ್ಕಾರದ ಸಾಧನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಗುರುನಾನಕ್ ಅವರ ಅನುಯಾಯಿಗಳು ಈಗ ಗುರುದ್ವಾರ ದರ್ಬಾರ್ ಸಾಹಿಬ್ ನ ದರ್ಶನಕ್ಕಾಗಿ ಇನ್ನು ಮುಂದಿನ ದಿನಗಳಲ್ಲಿ ಟೆಲಿಸ್ಕೋಪ್ ನ್ನು ನೋಡುವ ಅಗತ್ಯವಿರುವುದಿಲ್ಲ. 1947 ರಲ್ಲಿ ನಡೆದಿದ್ದ ತಪ್ಪನ್ನು ಈಗ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಸರಿಪಡಿಸಲು ಯತ್ನಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics