ದೇಶ

ಬಿಜೆಪಿ ಸಖ್ಯ ತೊರೆದರೆ ಹೊಸ ಸರ್ಕಾರ ರಚನೆಗೆ ಬೆಂಬಲ- ಸರ್ಬಾನಂದ ಸೊನೊವಾಲಾಗೆ ಕಾಂಗ್ರೆಸ್

Nagaraja AB

ದಿಸ್ ಪುರ: ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಿದ್ದರೆ ಮತ್ತೆ ಬಿಜೆಪಿ ಮೈತ್ರಿ ಸೇರುವುದಾಗಿ ಅಸ್ಸಾಂ ಗಣ ಪರಿಷತ್ ಹೇಳಿದ ಬೆನ್ನಲ್ಲೇ ಬಿಜೆಪಿ ಸಖ್ಯ ತೊರೆದು ಹೊಸ ಸರ್ಕಾರ ರಚಿಸಲು ಮುಂದಾದರೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲಾ ಅವರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಮುಖಂಡ ಡೆಬಬ್ರತಾ ಸೈಕಿಯಾ ಹೇಳಿದ್ದಾರೆ.

ನಾಗರಿಕ ತಿದ್ದುಪಡಿ ಮಸೂದೆ ಪ್ರತಿಭಟನೆಗೆ ಕಾರಣವಾಗಿದ್ದು, ಸರ್ಬಾನಂದ ಸೊನೊವಾಲ್ ಬಿಜೆಪಿಯಿಂದ ಹೊರಗಡೆ ಬಂದರೆ ಅವರನ್ನು ಬೆಂಬಲಿಸುವುದಾಗಿ ಪ್ರತಿಪಕ್ಷ ನಾಯಕರಾಗಿರುವ ಡೆಬಬ್ರತಾ ಸೈಕಿಯಾ ಟಿವಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ 25 ಶಾಸಕರನ್ನು ಹೊಂದಿದ್ದು, ಹೊಸ ಸರ್ಕಾರ ರಚನೆಗೆ ಅಸ್ಸಾಂ ಗಣ ಪರಿಷದ್ ಜೊತೆಗೆ  ಇತರ ಪಕ್ಷಗಳಿಂದಲೂ ಬೆಂಬಲ ನೀಡಲಾಗುವುದು  ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ 61, ಕಾಂಗ್ರೆಸ್ 25, ಅಸ್ಸಾಂ ಗಣ ಪರಿಷದ್ 14.  ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 13, ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ 12, ಒಬ್ಬರು ಪಕ್ಷೇತರ ಶಾಸಕರು ಇದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಅಸ್ಸಾಂ ಗಣ ಪರಿಷದ್  ಸೊನೊವಾಲ್ ಜೊತೆಗಿನ ಎರಡು ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿದೆ.

SCROLL FOR NEXT