ಚೀನಾ-ಭಾರತ ಗಡಿಯ 44 ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಸೇನೆಗೆ ಹೇಗೆ ಸಹಕಾರಿ ಇಲ್ಲಿದೆ ಮಾಹಿತಿ
ಚೀನಾ-ಭಾರತದ ಗಡಿ ಪ್ರದೇಶದ ಆಯಕಟ್ಟಿನ 44 ಪ್ರದೇಶದಲ್ಲಿ ಭಾರತ 2,100 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಯೋಜನೆ ಘೋಷಿಸಿದೆ.
ನವದೆಹಲಿ: ಚೀನಾ-ಭಾರತದ ಗಡಿ ಪ್ರದೇಶದ ಆಯಕಟ್ಟಿನ 44 ಪ್ರದೇಶದಲ್ಲಿ ಭಾರತ 2,100 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಯೋಜನೆ ಘೋಷಿಸಿದೆ.
2018-19 ರ ವಾರ್ಷಿಕ ವರದಿಯ ಪ್ರಕಾರ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಭಾರತ-ಚೀನಾ ಗಡಿಯ ಆಯಕಟ್ಟಿನ 44 ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದ್ದು, ಸಂಘರ್ಷದ ಸಂದರ್ಭದಲ್ಲಿ ಸೇನಾ ಪಡೆಗಳನ್ನು ರವಾನೆ ಮಾಡಲು ಈ ರಸ್ತೆ ನಿರ್ಮಾಣ ಕಾಮಗಾರಿ ಸಹಕಾರಿಯಾಗಲಿದೆ.
ಜಮ್ಮು-ಕಾಶ್ಮೀರದಿಂದ ಅರುಣಾಚಲಪ್ರದೇಶದವರೆಗು ಸುಮಾರು 4,000 ಕಿ.ಮೀ ವ್ಯಾಪ್ತಿಯಲ್ಲಿ ಚೀನಾ-ಭಾರತದ ಲೈನ್ ಆಫ್ ಕಂಟ್ರೋಲ್ ಹಾದುಹೋಗಲಿದೆ.
ಚೀನಾ ತನ್ನ ಗಡಿಯ ಪ್ರದೇಶಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಗಳ ಮೇಲೆ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಸಹ ಚೀನಾ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.