ದೇಶ

ಅಲೋಕ್ ವರ್ಮಾ ಪದಚ್ಯುತಿ 'ಕಾನೂನುಬಾಹಿರ,' ಸಿವಿಸಿ ವರದಿ ಬಹಿರಂಗಕ್ಕೆ ಖರ್ಗೆ ಒತ್ತಾಯ

Raghavendra Adiga
ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದ್ದ  ಪ್ರಧಾನಿ ನೇತೃತ್ವದ ಸಮಿತಿಯಲ್ಲಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೀಗ ಸಿಬಿಐ ನಿರ್ದೇಶಕರನ್ನಾಗಿ ಎಂ.ನಾಗೇಶ್ವರರಾವ್ ಅವರ ನೇಮಕಾತಿ "ಕಾನೂನುಬಾಹಿರ"  ಎಂದಿದ್ದಾರೆ. ಈ ಕುರಿತಂತೆ ಪ್ರಧಾನಿಗೆ ಪತ್ರ ಬರೆದಿರುವ ಖರ್ಗೆ ಜನವರಿ 10ರ ಸಭೆಯ ನಡಾವಳಿಗಳನ್ನು ಸಾರ್ವಜನಿಕರೆದುರು ಮುಕ್ತಗೊಳಿಸಬೇಕು. ನಿಖಾ ಸಂಸ್ಥೆಯ ಹೊಸ ಮುಖ್ಯಸ್ಥರನ್ನು ನೇಮಕ ಮಾಡಲು ಆಯ್ಕೆ ಸಮಿತಿಯ ಸಭೆಯನ್ನು ತಕ್ಷಣವೇ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ವರ್ಮಾ ಅವರ ವರ್ಗಾವಣೆ ಬಳಿಕ ನಾಗೇಶ್ವರರಾವ್ ನೇಮಕಾತಿಯಾಗಿದ್ದು ಕಾನೂನುಬದ್ದವಾದ ಕ್ರಮವಲ್ಲ. ಇದು ಆಯ್ಕೆ ಸಮಿತಿಯ ಅನುಮೋದನೆಯನ್ನೂ ಪಡೆದಿಲ್ಲ ಎಂದಿರುವ ಖರ್ಗೆ ಸಿಬಿಐಗೆ ಸ್ವತಂತ್ರ ನಿರ್ದೇಶಕರನ್ನು ನೇಮಕ ಂಆಡುವುದಕ್ಕೆ ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ವಾರ ನಡೆದಿದ್ದ ಆಯ್ಕೆ ಸಮಿತಿ ಸಭೆಯಲ್ಲಿ ಸಿಬಿಐ ಮುಖ್ಯಸ್ಥ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು. ಈ ಸಮಿತಿಯಲ್ಲಿ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪರವಾಗಿ ನ್ಯಾ. ಎ.ಕೆ. ಸಿಕ್ರಿ, ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ವರ್ಮಾ ಪದಚ್ಯುತಿಯ ಪರವಾಗಿ ಪ್ರಧಾನಿ ಮೋದಿ ಹಾಗೂ ನ್ಯಾಯಮೂರ್ತಿ ಸಿಕ್ರಿ ಮತ ಚಲಾಯಿಸಿದರೆ ಖರ್ಗೆ ಇದನ್ನು ವಿರೋಧಿಸಿದ್ದರು.
SCROLL FOR NEXT