ಪ್ರಭಾಸ್, ಶರ್ಮಿಳಾ 
ದೇಶ

ಪ್ರಭಾಸ್ ಜೊತೆಗೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಜಗನ್ ಮೋಹನ್ ರೆಡ್ಡಿ ಸಹೋದರಿ ಪೊಲೀಸರಿಗೆ ದೂರು!

ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಜೊತೆಗೆ ಅಕ್ರಮ ಸಂಬಂಧ ಇದೆ ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೈದ್ರಾಬಾದ್:  ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ  ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಜೊತೆಗೆ ಅಕ್ರಮ ಸಂಬಂಧ ಇದೆ ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಸಂಬಂಧ ನಿನ್ನೆ  ಹೈದ್ರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಶರ್ಮಿಳಾ, ಈ ರೀತಿ ಸಾಮಾಜಿಕ ಜಾಲತಾಣಗಳ ಮೂಲಕ  ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖಂಡೆಯಾಗಿರುವ ಶರ್ಮಿಳಾ, ತಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಪೊಲೀಸ್ ಆಯುಕ್ತೆ ಅಂಜನಿ ಕುಮಾರ್ ಬಳಿ  ದೂರು ದಾಖಲಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ,  ತೆಲುಗಿನ ಪ್ರಸಿದ್ಧ ನಟರಾಗಿರುವ ಪ್ರಭಾಸ್ ಜೊತೆಗೆ ತಮ್ಮಗೆ ಸಂಬಂಧವಿದೆ ಎಂಬಂತಹ ಸುಳ್ಳು ಪ್ರಚಾರ ಮಾಡಲಾಗುತ್ತಿದೆ.  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದರು.

ಈ ಪಿತೂರಿ ಹಿಂದೆ  ಟಿಡಿಪಿ  ಕೈವಾಡವಿದೆ ಎಂಬರ್ಥದಲ್ಲಿ   ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಪುತ್ರಿಯಾಗಿರುವ  ಶರ್ಮಿಳಾ  ಹೇಳಿಕೆ ನೀಡಿದ್ದಾರೆ.

2014 ರ ಚುನಾವಣೆ ಸಂದರ್ಭದಲ್ಲಿ ಈ ರೀತಿ ಅಪಪ್ರಚಾರ ನಡೆಸಲಾಗಿತ್ತು. ಮತ್ತೆ 2019ರ ಚುನಾವಣೆ ಸಂದರ್ಭದಲ್ಲೂ ಈ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದರ ಹಿಂದೆ  ಟಿಡಿಪಿ ಕೈವಾಡವಿರುವ ಶಂಕೆ ಇದ್ದು, ವೈಯಕ್ತಿಕವಾಗಿ ತೇಜೋವಧೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.

ಪ್ರಭಾಸ್ ಜೊತೆಗೆ ತಮ್ಮಗೆ ಯಾವುದೇ ರೀತಿಯ ಪರಿಚಯವೂ ಇಲ್ಲ, ಅವರೊಂದಿಗೆ ಮಾತುಕತೆ ಕೂಡಾ ನಡೆಸಿಲ್ಲ , ಗೃಹಿಣಿಯಾಗಿ, ತಾಯಿಯಾಗಿ ಇಂತಹ ಅಪ ಪ್ರಚಾರದಿಂದ ತಮ್ಮ ಮನಸ್ಸಿಗೆ ತುಂಬಾ  ನೋವಾಗಿರುವುದರಿಂದ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು  ಶರ್ಮಿಳಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈಶಾನ್ಯ ರಾಜ್ಯಗಳು 'ಭಾರತದ ಅಷ್ಟಲಕ್ಷ್ಮಿ'ಯರಿದ್ದಂತೆ, 'Act East', 'Act Fast' ನೀತಿಗೆ ಹೆಚ್ಚಿನ ಒತ್ತು: ಪ್ರಧಾನಿ ಮೋದಿ

ಜೈಲಿಗೆ ಹೋಗಿ ಬಂದ್ರು ಬುದ್ಧಿ ಕಲಿಯದ ರಜತ್! ಮತ್ತೊಂದು ಎಡವಟ್ಟು,Video ವೈರಲ್

ಹೆಸರಿನಲ್ಲಿ ಅಹಿಂಸೆ, ಮಾತಿನಲ್ಲಿ ಕನ್ನಡಿಗರಿಗೆ ಹಿಂಸೆ, ಚೇತನ್ ಗೆ ನಿಖಿಲ್ ಖಡಕ್ ತಿರುಗೇಟು!

ಸಂಕಷ್ಟ ತಂದ Birthday ಆಚರಣೆ: ರಸ್ತೆ ಪೆಟ್ರೋಲ್ ಸುರಿದು ಬೆಂಕಿ.. ಪೊಲೀಸರ ಅತಿಥಿಯಾದ ಫಹಾದ್ ಶೇಖ್! Video

ಕಲ್ಮಾ ಪಠಿಸುವಂತೆ ಅಮೆರಿಕದಿಂದ ಬಂದ ಉಗ್ರ ಒತ್ತಾಯ; ಒಪ್ಪದಿದ್ದಕ್ಕೆ ಭದ್ರತಾ ಸಿಬ್ಬಂದಿಗೆ ಇರಿದು ಹತ್ಯೆಗೆ ಯತ್ನ; ISIS ನಂಟು!

SCROLL FOR NEXT