ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರು 
ದೇಶ

ಮಕರ ಸಂಕ್ರಾಂತಿಗೆ ಪ್ರಯಾಗದ ಕುಂಭಮೇಳದಲ್ಲಿ ಮಿಂದೆದ್ದ ಸಾವಿರಾರು ಭಕ್ತರು

ಮಕರ ಸಂಕ್ರಾಂತಿಯ ಶುಭ ಮುಂಜಾನೆ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ...

ಪ್ರಯಾಗ್ ರಾಜ್: ಮಕರ ಸಂಕ್ರಾಂತಿಯ ಶುಭ ಮುಂಜಾನೆ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸೇರಿದ ಸಂದರ್ಭದಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತಿಯಿಂದ ಕುಂಭ ಮೇಳದಲ್ಲಿ ಪಾಲ್ಗೊಂಡು ಮಿಂದೆದ್ದರು.

ಕುಂಭಮೇಳ ಸಂದರ್ಭದಲ್ಲಿ ಸಕಲ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸಂಗಮದಲ್ಲಿ ಸ್ನಾನದ ಘಾಟ್ ಪ್ರದೇಶದಲ್ಲಿ 5 ಕಿಲೋ ಮೀಟರ್ ಉದ್ದದವರೆಗೆ ಸಂಚರಿಸುವ ಭಕ್ತರಿಗೆ ಅನುಕೂಲವಾಗಲು ತೆಪ್ಪದ ಸೇತುವೆ ನಿರ್ಮಿಸಲಾಗಿತ್ತು. ಭಕ್ತರ ಪ್ರವೇಶ ಮತ್ತು ನಿರ್ಗಮಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮಧ್ಯರಾತ್ರಿ ಕಳೆದ ಕೂಡಲೇ ಸಾವಿರಾರು ಭಕ್ತರು ದೇಶ ವಿದೇಶಗಳಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕುಂಭಮೇಳೆದ ಶುಭ ಮುಹೂರ್ತದಲ್ಲಿ ಧಾರ್ಮಿಕ ಪಠಣಗಳು, ಭಜನೆಗಳು ಕೇಳಿಬಂದವು.

ಇನ್ನು ಇಲ್ಲಿನ ಕುಂಭ ಮೇಳದಲ್ಲಿ 45 ನಿಮಿಷಗಳ ಶಾಹಿ ಸ್ನಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದ್ದು ಅದು ಈ ದಿನದ ನಿರ್ದಿಷ್ಟ ಗಳಿಗೆಯಲ್ಲಿ ನಡೆಯಲಿದೆ. ಪ್ರತಿ ಆರು ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತಿದ್ದು ಮಹಾ ಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!