ದೇಶ

ಆನ್ ಲೈನ್ ಮೂಲಕ ಎಫ್ಐಆರ್ ಸಲ್ಲಿಸಲು ಅವಕಾಶ ಕಲ್ಪಿಸಿ: ರೇಲ್ವೆಗೆ ರಾಜನಾಥ್ ಸಿಂಗ್

Lingaraj Badiger
ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ವೇಳೆ ಕಿರುಕುಳದಂತಹ ಸಮಸ್ಯೆಗಳು ಎದುರಾದರೆ ಪ್ರಯಾಣಿಕರು ಕೂಡಲೇ ಆನ್ ಲೈನ್ ಮೂಲಕ ಎಫ್ಐಆರ್ ಸಲ್ಲಿಸುವ ಸೌಲಭ್ಯ ಒದಗಿಸಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರೈಲ್ವೆ ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ.
ಪ್ರಯಾಣಿಕರು ಆನ್ ಲೈನ್ ಮೂಲಕ ಎಫ್ಐಆರ್ ಸಲ್ಲಿಸಲು ಅವಕಾಶ ಇಲ್ಲ. ಪ್ರಯಾಣದ ವೇಳೆ ಸಮಸ್ಯೆಯಾದರೆ ಅವರು ರೈಲಿನಿಂದ ಇಳಿದು ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕಾಗುತ್ತದೆ. ಇದರಿಂದ ಅವರ ಪ್ರಯಾಣಕ್ಕೆ ತೊಂದರೆಯಾಗುತ್ತದೆ ಮತ್ತು ದೂರು ನೀಡಿದ್ದಕ್ಕೆ ನ್ಯಾಯ ಸಿಗುತ್ತದೆ ಎಂಬ ಯಾವುದೇ ಭರವಸೆ ಇರುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಆನ್ ಲೈನ್ ಮೂಲಕ ಎಫ್ಐಆರ್ ಸಲ್ಲಿಸಲು ಅವಕಾಶ ಇದ್ದರೆ ಉತ್ತಮ. ಈ ಬಗ್ಗೆ ನೀವು(ರೈಲ್ವೆ ಸಚಿವಾಲಯದ ಅಧಿಕಾರಿಗಳು) ಚರ್ಚಿಸಿ ನಿರ್ಧಾರಕ್ಕೆ ಬನ್ನಿ. ಇದಕ್ಕೆ ಗೃಹ ಸಚಿವಾಲಯ ಅಗತ್ಯ ನೆರವು ನೀಡಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ವೇದಿಕೆಯಲ್ಲೇ ಇದ್ದ ರೈಲ್ವೆ ಸಚಿವ ಪಿಯೂಷ್ ಗೊಯಲ್ ಅವರು, ಗೃಹ ಸಚಿವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರತಿ ವರ್ಷ ರೈಲ್ವೆ ಪ್ರಯಾಣಿಕರಿಂದ 24 ಸಾವಿರ ಕಳ್ಳತನದ ಪ್ರಕರಣಗಳು ದಾಖಲಾಗುತ್ತಿವೆ.
SCROLL FOR NEXT