ದೇಶ

ಭಾರತ ಯಾವುದೇ ನಿರ್ದಿಷ್ಟ ಧರ್ಮ, ಜಾತಿ ಅಥವಾ ಭಾಷೆಗೆ ಸೇರಿದ್ದಲ್ಲ: ನಿತಿನ್ ಗಡ್ಕರಿ

Shilpa D
ನವದೆಹಲಿ: ಭಾರತ  ದೇಶ ಯಾವುದೇ ನಿರ್ಧಿಷ್ಟ ಧರ್ಮ, ಜಾತಿ ಅಥವಾ ಭಾಷೆಗೆ ಸೇರಿದ್ದಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೊಳಚೆ ಪ್ರದೇಶದ ಜನರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು , ಬಿಜೆಪಿ ಯಾವತ್ತೂ ಜಾತಿ, ಧರ್ಮದ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ.
ಜಾತಿ ಧರ್ಮದ ಆಧಾರದ ಮೇಲೆ ನಾವು ಎಂದಿಗೂ ರಾಜಕೀಯ ಮಾಡಿಲ್ಲ, ಮಾಡುವುದು ಇಲ್ಲ,  ಭಾರತದಲ್ಲಿ ಹಿಂದೂ, ಮುಸ್ಲಿಮ್, ಬುದ್ದರು ಹಾಗೂ ಕ್ರಿಶ್ಚಿಯನ್ನುರು ಸೇರಿದಂತೆ ಹಲವು ಪಂಗಡದ ಜನರಿದ್ದಾರೆ, 
ನಮಗೆ ಬಡವರ ಸೇವೆ ಹಾಗೂ ಅಭಿವೃದ್ದಿ ಮುಖ್ಯ, ಬುದ್ದ, ಜೈನ, ಮುಸ್ಲಿಂ ಯಾರೇ ಆಗಲಿ, ಬಡ ವ್ಯಕ್ತಿ ಅಷ್ಟೇ,ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ತಾರತಮ್ಯಮ ಮಾಡುವುದಿಲ್ಲ, ಅಭಿವೃದ್ದಿ ವಿಷಯದಲ್ಲಿ ನಮ್ಮನ್ನು ಯಾರೂ ಮೀರಿಸಲಾಗದು, ಆದರೆ ದೇಶದಲ್ಲಿ ಜಾತಿವಾದ, ಕೋಮುವಾದಗಳಂತ ವಿಷಬೀಜ ಬಿತ್ತಲಾಗುತ್ತಿದೆ ಎಂದು ಹೇಳಿದ್ದಾರೆ. 
SCROLL FOR NEXT