ದೇಶ

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಳಪೆ ಫಲಿತಾಂಶ: ಪಿಯುಬಿಜಿ ಗೇಮ್ ನಿಷೇಧಿಸಲು

Srinivas Rao BV
ಶ್ರೀನಗರ: ಪಿಯುಬಿಜಿ ಮೊಬೈಲ್ ಗೇಮ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಹದಿಹರೆಯದ ಯುವಕರು ಹೆಚ್ಚು ಈ ಗೇಮ್ ಗೆ ಆಕರ್ಷಿತರಾಗುತ್ತಿದ್ದಾರೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಪರಿಣಾಮ ಬೀರುತ್ತಿದೆ. 
ಗೇಮ್ ಗೀಳಿಗೆ ಬಿದ್ದಿರುವ ವಿದ್ಯಾರ್ಥಿಗಳು ಓದಿನತ್ತ ಗಮನ ಕಡಿಮೆ ಮಾಡಿದ್ದು, ಪಿಯುಬಿಜಿ ಗೇಮ್ ನ್ನು ನಿಷೇಧಿಸಬೇಕೆಂದು ಜಮ್ಮು-ಕಾಶ್ಮೀರ ವಿದ್ಯಾರ್ಥಿ ಸಂಘಟನೆ ಗೌರ್ನರ್ ಗೆ ಮನವಿ ಪತ್ರ ಸಲ್ಲಿಸಿದೆ. 
ವರದಿಗಳ ಪ್ರಕಾರ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘಟನೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗಿರುವ ಗೇಮ್ ನ್ನು ತಕ್ಷಣವೇ ನಿಷೇಧ ಮಾಡಬೇಕೆಂದು ಆಗ್ರಹಿಸಿದೆ. ಪಿಯುಬಿಜಿ ಗೇಮ್ ನ್ನು ವಿದ್ಯಾರ್ಥಿ ಸಂಘಟನೆ ಮಾದಕ ವ್ಯಸನಕ್ಕೆ ಹೋಲಿಕೆ ಮಾಡಿದ್ದು, ಗೇಮಿಂಗ್ ಗೀಳಿನಿಂದಾಗಿಯೆ 10 ನೇ ತರಗತಿ ಹಾಗೂ ಪ್ರಥಮ ಪಿಯುಸಿಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಕಳಪೆಯಾಗಿದೆ ಎಂದೂ ತಿಳಿಸಿದೆ. 
SCROLL FOR NEXT