ದೇಶ

ವೀಸಾ ಇಲ್ಲದಿದ್ದರೂ ಪರವಾಗಿಲ್ಲ ನೇಪಾಳ, ಭೂತಾನ್ ಭೇಟಿಗೆ ಆಧಾರ್ ಕಾರ್ಡ್ ನ್ನು ಬಳಕೆಗೆ ಅನುಮತಿ: ಷರತ್ತುಗಳು ಅನ್ವಯ!

Srinivas Rao BV
ನೇಪಾಳ ಹಾಗೂ ಭೂತಾನ್ ಗೆ ಭೇಟಿ ನೀಡುವ ಪ್ರಯಾಣಿಕರು ದಾಖಲೆಗಳನ್ನು ಒದಗಿಸುವುದಕ್ಕೆ ಆಧಾರ್ ಕಾರ್ಡ್ ನ್ನು ಇನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಬಹುದಾಗಿದೆ.
"ವಿಸಾ ಇಲ್ಲದೇ ಇದ್ದರೂ ಸಹ ಆಧಾರ್ ಕಾರ್ಡ್ ನ ವಿವರಗಳನ್ನು ಪ್ರಯಾಣ ದಾಖಲೆಯನ್ನಾಗಿ ನೀಡಬಹುದು ಆದರೆ ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಭಾರತದ ಗೃಹ ಸಚಿವಾಲಯದ ಹೇಳಿಕೆ ಮೂಲಕ ತಿಳಿದುಬಂದಿದೆ.  65ವಯಸ್ಸಿನ ಮೇಲ್ಪಟ್ಟವರು ಹಾಗೂ 15 ವಯಸ್ಸಿಗಿಂತ ಕಡಿಮೆ ವಯಸ್ಸಿನವರು ನೇಪಾಳಕ್ಕೆ ತೆರಳಲು ವೀಸಾ ಇಲ್ಲದೇ ಇದ್ದರೂ ಆಧಾರ್ ಕಾರ್ಡ್ ನ್ನು ದಾಖಲೆಯಾಗಿ ಸಲ್ಲಿಸಬಹುದಾಗಿದೆ. 
ಈ ಮುನ್ನ 65 ಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೆಂಟ್ರಲ್ ಗೌರ್ನಮೆಂಟ್ ಆರೋಗ್ಯ ಸೇವೆ ಕಾರ್ಡ್, ರೇಷನ್ ಕಾರ್ಡ್ ನ್ನು ಸಲ್ಲಿಸಬಹುದಾಗಿತ್ತು ಆದರೆ ಆಧಾರ್ ಕಾರ್ಡ್ ನ್ನು ಸಲ್ಲಿಸಲು ಅವಕಾಶವಿರಲಿಲ್ಲ. ಆದರೆ ಈಗ ಆಧಾರ್ ಕಾರ್ಡ್ ನ್ನು ದಾಖಲೆಗಳನ್ನು ಒದಗಿಸಬಹುದಾದ ಪಟ್ಟಿಯಲ್ಲಿ ಸೇರಿಸಲಾಗಿದೆ. 
SCROLL FOR NEXT