ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಸಮರ್ಥ ಹಾಗೂ ದಬ್ಬಾಳಿಕೆಯ ಸರ್ಕಾರದಿಂದ ತುಳಿತಕ್ಕೊಳಗಾದ ಎಲ್ಲರಿಗೂ ಇನ್ನೂ 100 ದಿನಗಳೊಳಗೆ ಮುಕ್ತಿ ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ದಬ್ಬಾಳಿಕೆ ಹಾಗೂ ಅಸಮರ್ಥತೆಯಿಂದ ತುಳಿತಕ್ಕೊಳಗಾದ ರೈತರು, ದೀನ ದಲಿತರು, ನಿರುದ್ಯೋಗಿಗಳೆಲ್ಲರಿಗೂ ಇನ್ನೂ 100 ದಿನಗಳೊಳಗೆ ಮುಕ್ತಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಕೋಲ್ಕತ್ತಾದಲ್ಲಿ ಟಿಎಂಸಿ ನಿನ್ನೆ ಆಯೋಜಿಸಿದ್ದ ಪ್ರತಿಪಕ್ಷಗಳ ಒಕ್ಕೂಟ ಭಾರತ ಸಮಾವೇಶ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ತಮ್ಮನ್ನು ರಕ್ಷಿಸಿಕೊಳ್ಳಲು ಅವರೆಲ್ಲಾ ಒಂದಾಗಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದರು.