ದೇಶ

ತೇಜಸ್ ಗೆ ಮತ್ತಷ್ಟು ಬಲ: ಶತ್ರು ಪಾಳಯವನ್ನು ಟಾರ್ಗೆಟ್ ಮಾಡುವ ಮತ್ತೊಂದು ಅಸ್ತ್ರ ಅಳವಡಿಕೆ!

Srinivas Rao BV
ನವದೆಹಲಿ: ದೇಶಿ ನಿರ್ಮಿತ ತೇಜಸ್ ಲಘು ವಿಮಾನ ಮತ್ತಷ್ಟು ಬಲಿಷ್ಠಗೊಳ್ಳಲಿದ್ದು, ಶತ್ರುಪಾಳಯವನ್ನು ಟಾರ್ಗೆಟ್ ಮಾಡಲು ಲೇಸರ್ ಡೆಸಿಗ್ನೇಟರ್ ಪಾಡ್ (ಎಲ್ ಡಿಪಿ) ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. 
ಡಿಆರ್ ಡಿಒದಿಂದ ನಿರ್ಮಾಣಗೊಂಡಿರುವ ಲೇಸರ್ ಡೆಸಿಗ್ನೇಟರ್ ಪಾಡ್ಸ್ ತೇಜಸ್ ಯುದ್ಧವಿಮಾನದ ದಾಳಿ ಹಾಗೂ ಯುದ್ಧದ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ರಾತ್ರಿ, ಹಗಲು, ಯಾವುದೇ ವಾತಾವರಣದಲ್ಲೂ ಸಮರ್ಥವಾಗಿ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ತೇಜಸ್ ಯುದ್ಧವಿಮಾನ  ಪಡೆಯಲಿದೆ.  
ಲೇಸರ್ ಡೆಸಿಗ್ನೇಟರ್ ಪಾಡ್ (ಎಲ್ ಡಿಪಿ) ಸೆನ್ಸಾರ್- ಟಾರ್ಗೆಟಿಂಗ್ ವ್ಯವಸ್ಥೆಯಾಗಿದ್ದು, ವೈಮಾನಿಕ ವಾತಾವರಣದ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸಲಿದೆ ಎಂದು ಭಾರತೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತೇಜಸ್ ಯುದ್ಧ ವಿಮಾನಕ್ಕೆ ಅಳವಡಿಸಲು ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಎಲ್ ಡಿಪಿ ಪೂರ್ಣಗೊಳಿಸಿದ್ದು, ಭಾರತೀಯ ವಿಜ್ಞಾನಿಗಳಾದ ಪಿ ಸುರೇಶ್ ಕುಮಾರ್, ಎನ್ಎನ್ಎಸ್ಎಸ್ ಆರ್ ಕೆ ಪ್ರಸಾದ್ ಹಾಗೂ ಕೆ. ಸೇಂಥಿಲ್ ಕುಮಾರ್ ಅವರು ಎಲ್ ಡಿಬಿ ಅಭಿವೃದ್ಧಿಪಡಿಸಿದ್ದಾರೆ.
SCROLL FOR NEXT