ದೇಶ

ಮಹಾರಾಷ್ಟ್ರ: ಇಸಿಸ್ ಸಂಪರ್ಕವಿದ್ದ ಒಂಬತ್ತು ಯುವಕರ ಬಂಧನ

Raghavendra Adiga
ಮುಂಬೈ: ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್)ಥಾಣೆ ಹಾಗೂ ಔರಂಗಾಬಾದ್ ಜಿಲ್ಲೆಯ ಒಂಬತ್ತು ಯುವಕರನ್ನು ಬಂಧಿಸಿದೆ. ಬಂಧಿತ ಯುವಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಇಸಿಸ್ ಜತೆ  ಸಂಬಂಧ ಹೊಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಎಟಿಎಸ್ ತಂಡ ಬಂಧಿಸಿರುವ ಒಂಬತ್ತು ಯುವಕರು ದೇಶಾದ್ಯಂತ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರೆಂಬ ಶಂಕೆ ಇದೆ ಎಂದು  ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ. ನಾವು ಈ ಒಂಬತ್ತು ಯುವಕರ ಮೇಲೆ ಕಳೆದ ಅನೇಕ ವಾರಗಳಿಂಡ ಕಣ್ಗಾವಲಿಟ್ಟಿದ್ದೆವು. ಬೇರೆ ಮೂಲಗಳಿಂದ ಸಹ ಅವರಿಗೆ ಸಂಬಂಧಿಸಿದ ಮಾಹಿತಿ ಕಲೆ  ಹಾಕಿದ್ದೆವು ಎಂದುಅವರು ಹೇಳಿದರು.
ಅವರು ಇನ್ನೇನು ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನುವಾಗ ನಾವು ಅವರನ್ನು ಬಂಧಿಸಿದ್ದೇವೆ. ಎಂದಿರುವ ಅಧಿಕಾರಿಗಳು ಕೆಲವು ರಾಸಾಯನಿಕಗಳು, ಆಸಿಡ್ ಬಾಟಲಿಗಳು, ಚಾಕು, ಮೊಬೈಲ್ ಫೋನ್ ಗಳು, ಸಿಮ್ ಕಾರ್ಡ್ ಗಳು, ಹಾರ್ಡ್ ಡಿಸ್ಕ್ ಸೇರಿ ಹಕವು ವಸ್ತುಗಳನ್ನು ಬಂಧಿತರಿಂದ ವಶಕ್ಕೆ ಪಡೆದಿದ್ದಾಗಿಯೂ ವಿವರಿಸಿದ್ದಾರೆ.
ಆರೋಪಿಗಳ ವಿರುದ್ಧ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ) (ಕ್ರಿಮಿನಲ್ ಪಿತೂರಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಮತ್ತು ಬಾಂಬೆ ಪೋಲಿಸ್ ಆಕ್ಟ್ ಅಡಿಯಲ್ಲಿ ಹಲವು ಪ್ರಕರಣ ದಾಖಲಿಸಲಾಗಿದೆ.
SCROLL FOR NEXT