ದೇಶ

ಶಂಕರ್ ಸಿಂಗ್ ವಘೇಲಾ ಎನ್ ಸಿಪಿ ಸೇರಲು ವೇದಿಕೆ ಸಜ್ಜು

Nagaraja AB

ಗುಜರಾತ್ : ಗುಜರಾತಿನ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ- ಎನ್ ಸಿಪಿ ಸೇರಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕ ಇಂದು ತಿಳಿಸಿದೆ.

 ಕ್ಷತ್ರಿಯ ಸಮಾಜದ ಪ್ರಬಲ ನಾಯಕರಾಗಿರುವ 78 ವರ್ಷದ ಶಂಕರ್ ಸಿಂಗ್ ವಘೇಲಾ, 2017 ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ  ಕಾಂಗ್ರೆಸ್ ತೊರೆದಿದ್ದರು. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ನೆರವು ನೀಡಿದ್ದರು.

ಎನ್ ಸಿಪಿ  ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಹಾಗೂ   ಹಿರಿಯ ಮುಖಂಡ ಪ್ರಪುಲ್ ಪಟೇಲ್ ಸಮ್ಮುಖದಲ್ಲಿ ಶಂಕರ್ ಸಿಂಗ್ ವಘೇಲಾ ಎನ್ ಸಿಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಗುಜರಾತ್ ಎನ್ ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಅಲಿಯಾಸ್ ಬೊಸ್ಕಿ ಹೇಳಿದ್ದಾರೆ.

ವಘೇಲಾ ಡೈನಾಮಿಕ ಮುಖಂಡರಾಗಿದ್ದು, ರಾಜ್ಯ ಹಾಗೂ ದೇಶದ ನಾಡಿಮಿಡಿತವನ್ನು ಬಲ್ಲವರಾಗಿದ್ದಾರೆ. ಅವರು ಎನ್ ಸಿಪಿ ಸೇರ್ಪಡೆಯಾಗುವುದಕ್ಕೆ ಸ್ವಾಗತಿಸುತ್ತೇನೆ. ಇದರಿಂದಾಗಿ ರಾಜ್ಯದಲ್ಲಿ ಎನ್ ಸಿಪಿ ಪಕ್ಷ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಅವರು  ತಿಳಿಸಿದ್ದಾರೆ.

ಮಾಜಿ ಕೇಂದ್ರ  ಸಚಿವರಾಗಿರುವ ಶಂಕರ್ ಸಿಂಗ್ ವಘೇಲಾ ಜನವರಿ 29 ರಂದು ಎನ್ ಸಿಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.ಆದಾಗ್ಯೂ, ವಘೇಲಾ ಈ ಬಗ್ಗೆ ಏನನ್ನೂ ಹೇಳಿಕೆ ನೀಡಿಲ್ಲ.
ವಘೇಲಾ ಎನ್ ಸಿಪಿಗೆ ಸೇರ್ಪಡೆಯಾಗಿ ಕಾಂಗ್ರೆಸ್ ಎನ್ ಸಿಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದಿದ್ದಲ್ಲೀ  ಗುಜರಾತಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಹೋರಾಟ ಕಂಡುಬರಲಿದೆ.
SCROLL FOR NEXT