ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ನಿಯಂತ್ರಣಕ್ಕೆ ಆರ್ ಎಸ್ಎಸ್ ಯತ್ನ: ರಾಹುಲ್

ಬಿಜೆಪಿ ಮಾತೃ ಪಕ್ಷ ಆರ್ ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಬಿಜೆಪಿ ನೇತೃತ್ವದ...

ರಾಹುಲ್ ಗಾಂಧಿ
Lingaraj Badiger
Updated On : 25 Jan 2019, 3:10 am
ಭುವನೇಶ್ವರ್: ಬಿಜೆಪಿ ಮಾತೃ ಪಕ್ಷ ಆರ್ ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಆರ್ ಎಸ್ಎಸ್ ಮುದ್ರೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಆರ್ ಎಸ್ ಎಸ್ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸುತ್ತಿದೆ ಮತ್ತು ದೇಶದಲ್ಲಿ ತಾನೊಂದೇ ಸಂವಿಧಾನಿಕ ಸಂಸ್ಥೆ ಎಂದು ನಂಬಿದೆ. ಇತರೆ ಎಲ್ಲಾ ಸಂಸ್ಥೆಗಳನ್ನು ನಾಶಪಡಿಸಲು ಮತ್ತು ಅವುಗಳನ್ನು ನಿಯಂತ್ರಿಸಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಆರ್ ಎಸ್ ಎಸ್ ಮನಸ್ಥಿತಿಯಿಂದಾಗಿ ನ್ಯಾಯಾಂಗ ಹಾಗೂ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗೊಂದಲಕ್ಕೆ ಕಾರಣವಾಗಿದೆ ಎಂದಿದ್ದಾರೆ.

Advertisement

Advertisement

ಇಂದು ಭುವನೇಶ್ವರ್ ದಲ್ಲಿ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, 120 ಕೋಟಿ ಭಾರತೀಯರು ಈ ದೇಶವನ್ನು ಮುನ್ನಡೆಸಬೇಕು ಎಂಬ ಸಿದ್ಧಾಂತವನ್ನು ನಾವು ನಂಬಿದ್ದೇವೆ. ಆದರೆ ಯಾವುದೋ ಒಂದು ಸಿದ್ಧಾಂತ ಈ ದೇಶ ಮುನ್ನಡೆಸುವುದು ನಮಗೆ ಬೇಕಾಗಿಲ್ಲ ಎಂದರು.
ಬಿಜೆಪಿ ಮತ್ತು ಆರ್ ​ಎಸ್​ಎಸ್​ ನಿಂದ ನಾನು ಪಡೆದ ಬಹುದೊಡ್ಡ ಕೊಡುಗೆ ನಿಂದನೆ ಮತ್ತು ಅವಮಾನ ಎಂದು ರಾಹುಲ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ನಿಂದಿಸಿದಷ್ಟೂ ನಾನು ಅವರನ್ನು ಅಪ್ಪಿಕೊಳ್ಳಲು ಇಷ್ಟ ಪಡುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement