ದೇಶ

ವೀಡಿಯೋಕಾನ್ ಪ್ರಕರಣ: ದೀಪಕ್ ಕೋಚಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿ ವರ್ಗ

Raghavendra Adiga
ನವದೆಹಲಿ: ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಅಕ್ರಮ ಸಾಲ ಪ್ರಕರಣದಲ್ಲಿ ಬ್ಯಾಂಕ್ ನ ಮಾಜಿ ಅಧ್ಯಕ್ಷೆ ಚಂದಾ ಕೋಚಾರ್ ಅವರ ಪತಿ ದೀಪಕ್ ಕೋಚಾರ್ ಮೇಲೆ ಎಫ್ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿ ವರ್ಗಾವಣೆಯಾಗಿದ್ದಾರೆ.
ಸಿಬಿಐ ಐಸಿಐಸಿಐ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೋಚಾರ್ ಅವರ ಪತಿ ಮತ್ತು ಇತರರ ವಿರುಧ ಪ್ರಕರಣ ದಾಖಲಿಸಿಕೊಂಡ  ಒಂದು ದಿನದ ತರುವಾಯ ಈ ಬೆಳವಣಿಗೆ ನಡೆದಿದೆ.
ದೆಹಲಿಯ ಸಿಬಿಐನ ಬ್ಯಾಂಕಿಂಗ್ ಮತ್ತು ಸೆಕ್ಯುರಿಟೀಸ್ ಫ್ರಾಡ್ ಸೆಲ್ ನ ಪೊಲೀಸ್ ಅಧೀಕ್ಷಕರಾಗಿದ್ದ ಸುಧಾಂಶು ಧರ್ ಮಿಶ್ರಾ ಜಾರ್ಖಂಡ್ ನ ರಾಂಚಿಯಲ್ಲಿನ ಸಿಬಿಐನ ಆರ್ಥಿಕ ಅಪರಾಧ ಶಾಖೆಗೆ ವರ್ಗಾವಣೆಗೊಂಡಿದ್ದಾರೆ.
ಐಸಿಐಸಿಐ-ವಿಡಿಯೊಕಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 22ರಂದು ಚಂದಾ ಕೋಚಾರ್, ದೀಪಕ್ ಕೋಚಾರ್, ವೇಣುಗೋಪಾಲ್ ಧೂತ್ ಮತ್ತು ಇತರರ ವಿರುದ್ಧ ಮಿಶ್ರಾ ಎಫ್ಐಆರ್ ಪ್ರತಿಗೆ ಸಹಿ ಹಾಕಿದ್ದರು. ಜನವರಿ 24ರಂದು ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಿಸಿ  ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಓ ಅವರ ಪತಿ ದೀಪಕ್ ಕೋಚಾರ್, ವಿಡಿಯೋಕಾನ್ ಎಂ.ಡಿ. ವೇಣುಗೋಪಾಲ್ ಧೂತ್ ಅವರ ಮೇಲೆ ಸಿಬಿಐ ಪ್ರಕರಣ ದಾಖಲಿಸಿತ್ತು.
ವಿಡಿಯೋಕಾನ್ ಗೆ ಸಾಲ ನೀಡುವ ಪ್ರಕ್ರಿಯೆಯಲ್ಲಿ ಕೋಚಾರ್ ಅಕ್ರಮ ಎಸಗಿದ್ದಾರೆ ಎನ್ನಲಾಗಿದ್ದು ತಮ್ಮ ಮೇಲೆ ಆರೋಪ ಕೇಳಿ ಬಂದ ನಂತರ ಚಂದಾ ಕೋಚಾರ್ ಕಳೆದ ವರ್ಷ ಅಕ್ಟೋಬರ್ 4ರಂದು ಐಸಿಐಸಿಐ ಬ್ಯಾಂಕ್ ಆಡಳಿತದಿಂದ ದೂರ ಸರಿದರು.
SCROLL FOR NEXT