ಬರ ಪೀಡಿತ ಕರ್ನಾಟಕಕ್ಕೆ ಕೇಂದ್ರದಿಂದ 949 ಕೋಟಿ ರೂ ನೆರವು
ನವದೆಹಲಿ: ಬರ ಪೀಡಿತ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 949 ಕೋಟಿ ರೂಪಾಯಿ ನೆರವು ನೀಡಿರುವುದಾಗಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ.
"2018-19 ಮುಂಗಾರಿನಲ್ಲಿ ಬರ ಪೀಡಿತ ಪ್ರದೇಶಗಳಿಗೆ ನೆರವು ನೀಡಲು ಕರ್ನಾಟಕಕ್ಕೆ 949.49 ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ" ಎಂದು ಸಚಿವರು ಹೇಳಿದ್ದಾರೆ. 2018 ರ ಅಕ್ಟೋಬರ್ ನಲ್ಲಿ ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ ಕೇಂದ್ರದಿಂದ 2,424 ಕೋಟಿ ರೂಪಾಯಿ ನೆರವು ಕೇಳಿತ್ತು.
ಬರದಿಂದಾಗಿ ರಾಜ್ಯದಲ್ಲಿ 26.18 ಲಕ್ಷ ಹೆಕ್ಟೇರ್ ನಷ್ಟು ಕೃಷಿ ಪ್ರದೇಶ 1.94 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕಾ ಪ್ರದೇಶ ಹಾಗೂ ಶೇ.33 ರಷ್ಟು ಬೆಳೆ ನಷ್ಟ ಎದುರಾಗಿತ್ತು. ಬರ ಮತ್ತು ಪ್ರವಾಹದಿಂದಾಗಿ ಒಟ್ಟಾರೆ ರಾಜ್ಯಕ್ಕೆ 20,000 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು ಎಂದು ಕಂದಾಯ ಇಲಾಖೆ ಅಂದಾಜಿಸಿತ್ತು.