ಸಾಂದರ್ಭಿಕ ಚಿತ್ರ 
ದೇಶ

ಭೂಪಾಲ್: ಕೀಚಕನನ್ನು ಅಟ್ಟಾಡಿಸಿ, ಯುವತಿಯನ್ನು ಅತ್ಯಾಚಾರದಿಂದ ಪಾರು ಮಾಡಿದ ಬೀದಿನಾಯಿ!

ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಈ ಶ್ವಾನ ಹೇಗೆ ಉತ್ತಮ ಸ್ನೇಹಿತ ಎಂಬುದು ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸ್ಪಷ್ಟ ನಿದರ್ಶನ ಎಂಬಂತಿದೆ. ಬೀದಿ ನಾಯಿಯೊಂದು 29 ವರ್ಷದ ಯುವತಿಯನ್ನು ಅತ್ಯಾಚಾರದಿಂದ ಕಾಪಾಡಿದೆ.

ಭೂಪಾಲ್ : ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ.  ಈ ಶ್ವಾನ ಹೇಗೆ ಉತ್ತಮ ಸ್ನೇಹಿತ ಎಂಬುದು ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸ್ಪಷ್ಟ ನಿದರ್ಶನ ಎಂಬಂತಿದೆ.  ಬೀದಿ ನಾಯಿಯೊಂದು 29 ವರ್ಷದ ಯುವತಿಯನ್ನು ಅತ್ಯಾಚಾರದಿಂದ ಕಾಪಾಡಿದೆ.

ಭೂಪಾಲ್ ನ ಚೊಲಾ ಬಡಾವಣೆಯ ಕಾಲೋನಿಯ ಮನೆಯೊಂದರಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮನೆಯಲ್ಲಿ ಒಬ್ಬಂಟಿಯಾಗಿದ್ದ ಯುವತಿಯನ್ನು ನೋಡಿದ ನೆರಮನೆಯ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಮನೆಯೊಳಗೆ ಇದ್ದ ಬೀದಿ ನಾಯಿ ಶೆರು, ಕೀಚಕನ ಮೇಲೆ ಎರಗಿ, ಅಟ್ಟಿಸಿಕೊಂಡು ಹೋಗಿದೆ. ಆದರೆ, ದಾಳಿ ವೇಳೆಯಲ್ಲಿ ಅದಕ್ಕೂ ಸಾಕಷ್ಟು ಗಾಯವಾಗಿದೆ.

ನಂತರ ಆ ಯುವತಿ ಪೊಲೀಸರಿಗೆ ದೂರು ನೀಡಿದ್ದು,  ಸುನೀಲ್ ಎಂಬ ನೆರಮನೆಯ ಯುವಕ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಉದ್ಯೋಗ ಇಲ್ಲದೆ ಅಲೆಯುತ್ತಿದ್ದ ಆ ಯುವಕ ಆಗಾಗ್ಗೆ ತೊಂದರೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಯುವತಿಯನ್ನು ರಕ್ಷಿಸಲು ಹೋದ ನಾಯಿ ಮೇಲೆ ಸುನೀಲ್ ಯಾವ ರೀತಿ ಗಾಯಗೊಳಿಸಿದ ಎಂಬುದನ್ನು ಕೂಡಾ ಪೊಲೀಸ್ ಅಧಿಕಾರಿಗಳಿಗೆ ಈ ಯುವತಿ  ತಿಳಿಸಿದ್ದಾಳೆ.
ಬೀದಿನಾಯಿ ಶೆರು, ಯುವತಿಯನ್ನು ಅತ್ಯಾಚಾರದಿಂದ ರಕ್ಷಿಸಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಚೋಲಾ ಪೊಲೀಸ ಠಾಣೆಯ ಸ್ಟೇಷನ್  ಅಧಿಕಾರಿ  ರಾದೇಶ್ಯಾಮ್ ರಾಯ್ ಗಡ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊಲೆ ಆರೋಪಿ ನಟ ದರ್ಶನ್​​ಗೆ ಮತ್ತೊಂದು ಶಾಕ್; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

'ಪಾಕಿಸ್ತಾನಕ್ಕೆ ಸರಿಯಾದ ಸಲಹೆ ನೀಡಿ': ಜಮ್ಮು- ಕಾಶ್ಮೀರ ಕುರಿತ ಹೇಳಿಕೆ ಬಗ್ಗೆ OIC ಗೆ ಭಾರತದ ತಿರುಗೇಟು!

ಗಂಡನಿಗೆ ಗೊತ್ತಾಗದಂತೆ ಹೆಂಡತಿ ಅಕೌಂಟ್‌ಗೆ 2 ಸಾವಿರ ಹಾಕ್ತೀವಿ ಅಂದಿದ್ದ ಸರ್ಕಾರಕ್ಕೆ ಈಗ ಯಜಮಾನನ ಆಧಾರ್ ಯಾಕೆ ಬೇಕು?

ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ; ಕರ್ನಾಟಕಕ್ಕೆ ಹೊಸ ಉಸ್ತುವಾರಿ ನೇಮಕ; ರಾಧಾಮೋಹನ್‌ ದಾಸ್‌ಗೆ ಕೊಕ್!

ಕಚ್ಚಾ ತೈಲ ಬೆಲೆ ಇಳಿಕೆ ಎಫೆಕ್ಟ್; ಕೊನೆಗೂ ಪುಟಿದೆದ್ದ Indian Stock market, ಸೆನ್ಸೆಕ್ಸ್ 299 ಅಂಕ ಏರಿಕೆ!