ಅಹಮದಾಬಾದ್: ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ನವಜೋಡಿಯೊಂದು ವಿವಾಹವಾದ ಕೆಲವೇ ನಿಮಿಷಗಳಲ್ಲಿ ವಿಚ್ಛೇದನ ಪಡೆದ ಘಟನೆ ಗುಜರಾತ್ ನ ಅಹಮದಾಬಾದ್ ಜಿಲ್ಲೆಯ ಗೊಂದಲ್ ನಲ್ಲಿ ನಡೆದಿದೆ.
ವಿವಾಹದ ಬಳಿಕ ಊಟದ ವಿಷಯವಾಗಿ ವರ ಹಾಗೂ ವಧುವಿನ ಕಡೆಯವರಿಗೆ ಭಿನ್ನಾಭಿಪ್ರಾಯ ಹುಟ್ಟಿದ್ದು, ವಾಗ್ವಾದಕ್ಕೆ ಕಾರಣವಾಗಿದೆ. ಕೂಡಲೇ ಎರಡು ಕಡೆಯವರು ವಕೀಲರನ್ನು ಕರೆಯಿಸಿ, ನವ ದಂಪತಿಗೆ ವಿಚ್ಛೇದನ ಕೊಡಿಸಿದ್ದಾರೆ.
ಮಿರರ್ ನೌ ವರದಿಯ ಪ್ರಕಾರ, ವಿವಾಹ ಮಂಟಪದಲ್ಲಿ ಏಳೇಳು ಜನ್ಮಗಳಲ್ಲೂ ಜೊತೆಯಾಗಿರುತ್ತೇನೆ ಎಂಬ ವಾಗ್ದಾನ ಮಾಡಿದ್ದ ದಂಪತಿ, ಕೇವಲ ಊಟದ ವಿಷಯಕ್ಕಾಗಿ ನಡೆದ ಗಲಾಟೆಯ ಪರಿಣಾಮ ಕೇವಲ ಅರ್ಧ ಗಂಟೆಯಲ್ಲಿಯೇ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟುಕೊಂಡಿದ್ದಾರೆ.
ಮದುವೆ ಮನೆಯಲ್ಲಿ ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ತಾರಕಕ್ಕೇರುತ್ತಿದ್ದಂತೆ, ಯಾರೋ ಒಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಬಂದ ಬಳಿಕ ಜಗಳವೇನೋ ತಿಳಿಯಾಗಿತ್ತು. ಆದರೆ, ಉಭಯ ಪಕ್ಷದವರಲ್ಲಿ ಅಸಮಾಧಾನದ ಹೊಗೆ ಮಾತ್ರ ಕಡಿಮೆಯಾಗಿರಲಿಲ್ಲ. ಕೂಡಲೇ ವಕೀಲರನ್ನು ಕರೆಯಿಸಿ ವಿಚ್ಛೆದನ ಪಡೆಯುವ ನಿರ್ಧಾರ ತೆಗೆದುಕೊಂಡರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos