ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಹುಲ್ ಗಾಂಧಿಯನ್ನು ಮುಸಲೋನಿಗೆ ಹೋಲಿಸಿದ ಬಿಜೆಪಿ,ನಿರುದ್ಯೋಗ ಟೀಕೆಗೆ ಸಮರ್ಥನೆ

ಇಪಿಎಫ್ ಒ ಪ್ರಕಾರ , ಕಳೆದ 15 ತಿಂಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ತೀವ್ರ ಹೆಚ್ಚಳವಾಗಿದೆ. ಕೆಲಸದ ವಿಲ್ಲದ ಒಬ್ಬನೇ ವ್ಯಕ್ತಿ ಮಾತ್ರ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್ ಗಾಂಧಿ
Nagaraja AB
Updated On : 31 Jan 2019, 4:55 am
ನವದೆಹಲಿ: ಇಪಿಎಫ್ ಒ ಪ್ರಕಾರ , ಕಳೆದ 15 ತಿಂಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ತೀವ್ರ ಹೆಚ್ಚಳವಾಗಿದೆ. ಕೆಲಸದ ವಿಲ್ಲದ ಒಬ್ಬನೇ ವ್ಯಕ್ತಿ ಮಾತ್ರ  ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಬಿಜೆಪಿ  ಆರೋಪಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸರ್ವಾಧಿಕಾರಿ ಮುಸಲೋನಿಗೆ ಹೋಲಿಸಿದೆ.
ದೇಶದ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತಿ ಹೆಚ್ಚಾಗಿರುವ ಬಗ್ಗೆ ಟ್ವೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ಯೂರ್  ( ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್  ಹಿಟ್ಲರ್ ಎಂಬ ಅರ್ಥ ಕೊಡುವ ) ಶಬ್ದ ಬಳಸಿದ್ದಕ್ಕೆ ಬಿಜೆಪಿ  ಆಕ್ಷೇಪ ವ್ಯಕ್ತಪಡಿಸಿದೆ.

ನೊ ಮೊ ಜಾಬ್ಸ್  ಅಡಿ ಬರಹದಲ್ಲಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ,ಐದು ವರ್ಷಗಳಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಉದ್ಯೋಗಿ ಸೃಷ್ಟಿ ಮಾಹಿತಿ ವರದಿ ಸೋರಿಕೆ  ರಾಷ್ಟ್ರೀಯ ವಿಪತ್ತು ಆಗಿದೆ. ದೇಶದಲ್ಲಿನ 45 ವರ್ಷಗಳಲ್ಲಿಯೇ ಕಂಡಿರದ ನಿರುದ್ಯೋಗ ಸ್ಥಿತಿ ಪರಿಸ್ಥಿತಿ ಇದೆ. 2017-18 ಒಂದರಲ್ಲಿಯೇ  6.5 ಕೋಟಿ ಯುವಜನರು ಉದ್ಯೋಗ ಇಲ್ಲದಂತಾಗಿದೆ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement