ದೇಶ

2022ರೊಳಗೆ ಅಪೌಷ್ಠಿಕತೆ ಮುಕ್ತ ಭಾರತ- ಕೇಂದ್ರ ಸಚಿವೆ ಸ್ಮೃತಿ ಇರಾನಿ

Nagaraja AB
ನವದೆಹಲಿ:2022 ರೊಳಗೆ ಭಾರತದಲ್ಲಿ ಅಪೌಷ್ಟಿಕತೆ ಮುಕ್ತ ಭಾರತವನ್ನಾಗಿ  ಮಾಡಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿಂದು ಹೇಳಿದರು.
ಪೋಷಣಾ ಅಭಿಯಾನ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು, 2022ರೊಳಗೆ ಗುರಿಯನ್ನು ಭಾರತ ಸಾಧಿಸಲಿದೆ ಎಂದು ತಿಳಿಸಿದರು.
ಪೋಷಣಾ ಅಭಿಯಾನ ಯೋಜನೆ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಪೌಷ್ಠಿಕತೆ ಪ್ರಕರಣಗಳು ಇಲ್ಲದಂತಾಗುವುದು ಎಂದು ತಿಳಿಸಿದರು.
ಎಎಪಿ ಸದಸ್ಯ ಸುಶೀಲ್ ಕುಮಾರ್ ಗುಪ್ತಾ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಅಪೌಷ್ಠಿಕತೆ ಬಗ್ಗೆ ಮಾತನಾಡುವಾಗ ನೀರು, ನೈರ್ಮಲ್ಯ ಮತ್ತಿತರ ಅಂಶಗಳ ಬಗ್ಗೆ ಗಮನ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದರು.
ಕೇಂದ್ರಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಒತ್ತು ನೀಡಿದ್ದು,ಪ್ರತಿಯೊಬ್ಬ ಫಲಾನುಭವಿಗೂ ಪೌಷ್ಠಿಕ ಆಹಾರ ದೊರೆಯುವಂತೆ ಮಾಡಲಾಗಿದೆ. ಪೋಷಣಾ ಅಭಿಯಾನ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು, ಮಕ್ಕಳು, ಗರ್ಭೀಣಿಯರಿಗೆ ಪೌಷ್ಠಿಕ ಆಹಾರ ದೊರೆಯುವಂತೆ ಮಾಡಲಾಗಿದೆ ಎಂದು ಸ್ಮೃತಿ ಇರಾನಿ ಹೇಳಿದರು.
SCROLL FOR NEXT