ದೇಶ

ಮಧ್ಯಪ್ರದೇಶ: ಎಕ್ಸ್-ರೇಗಾಗಿ ಪರಪುರುಷನೊಡನೆ ಒಂದೇ ಸ್ಟ್ರೆಚರ್‌ನಲ್ಲಿ ತೆರಳಲು ಮಹಿಳೆಗೆ ಒತ್ತಾಯ

Raghavendra Adiga
ಭೋಪಾಲ್: ಆಘಾತಕಾರಿ ಪ್ರಕರಣವೊಂದರಲ್ಲಿ, ಮಹಿಳೆ ಹಾಗೂ  ಪುರುಷ ರೋಗಿಯನ್ನು (ಇಬ್ಬರೂ ಒಬ್ಬರಿಗೊಬ್ಬರು ಅಪರಿಚಿತರು) ಒಂದೇ ಸ್ಟ್ರೆಚರ್‌ನಲ್ಲಿ ಎಕ್ಸ್-ರೇ ಪರೀಕ್ಷೆಗೆ ಒಳಪಡಬೇಕೆಂದು ಒತ್ತಾಯಿಸಿರುವ ಘಟನೆ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಇಂದೋರ್ ನ ಮಹರಾಜ ಯಶ್ವಂತರಾವ್  ಆಸ್ಪತ್ರೆ(ಎಂವೈ ಆಸ್ಪತ್ರೆ)ಯಲ್ಲಿ ಬುಧವಾರ ಈ ಘಟನೆ ನಡೆದಿದ್ದು  ಖಾಂಡ್ವಾ ಜಿಲ್ಲೆಯ ಪಂಧನ ನಿವಾಸಿ ಸಂಗೀತಾ ಹಾಗೂ ಓರ್ವ ಪುರುಷ ರೋಗಿಯನ್ನು ಒಟ್ಟಾಗಿ ಸ್ಟ್ರೆಚರ್ ಮೇಲೆ ಮಲಗಿಸಿ ಒಂದೇ ಬಾರಿಗೆ ಎಕ್ಸ್-ರೇ ಪರೀಕ್ಷೆಗೆ ಕರೆದೊಯ್ಯಲಾಗಿದೆ.
ಸಂಗೀತಾ ಅವರಿಗೆ ಅಪಘಾತವೊಂದರಲ್ಲಿ ಬಲಗಾಲು ಫ್ರ್ಯಾಕ್ಚರ್ ಆಗಿ ಕಳೆದ 12 ದಿನಗಳಿಂಡ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ, ಆನ್-ಡ್ಯೂಟಿ ವೈದ್ಯರು ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಎಕ್ಸ್-ರೇಗಾಗಿ ತೆರಳಲು ಹೇಳಿದ್ದಾರೆ. ಆ ವೇಳೆ ಪುರುಷ ರೋಗಿಯೊಬ್ಬ ಅದಾಗಲೇ ಎಕ್ಸ್-ರೇ ಗಾಗಿ ಕರೆದೊಯ್ಯಲಾಗುತ್ತಿತ್ತು.ಆದರೆ ಆಸ್ಪತ್ರೆಯಲ್ಲಿ  ಬೇರೆ ಯಾವುದೇ ಸ್ಟ್ರೆಚರ್ ಅಥವಾ ಗಾಲಿಕುರ್ಚಿ ಲಭ್ಯವಿಲ್ಲದ ಕಾರಣ,  ಸಂಗೀತಾ ಅವರನ್ನೂ ಅದೇ ಸ್ಟ್ರೆಚರ್ ಮೇಲೆ ಮಲಗುವಂತೆ ಹೇಳಲಾಗಿದೆ. ”ಎಂದು ಸಂಗೀತಾರ ಸಂಬಂಧಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ.
"ಸಂಗೀತಾಗೆ ಚಿಕಿತ್ಸೆ ದೊರೆಯಲೆಂಬ ಒಂದೇ ಕಾರಣಕ್ಕೆ ನಾನು ಅದೇ  ಸ್ಟ್ರೆಚರ್‌ನಲ್ಲಿ ಹೋಗಲು ಅನುಮತಿ ನೀಡಿದೆ " ಧರ್ಮೇಂದ್ರ ಹೇಳಿದ್ದಾರೆ.
"ಒಂದೇ ಸ್ಟ್ರೆಚರ್‌ನಲ್ಲಿ ಹೋಗುವುದರಿಂದ ಸಮಸ್ಯೆಯಾಗುತ್ತದೆ ಎಂದು ವೈದ್ಯರಿಗೆ ಅರಿಕೆ ಮಾಡಿದ್ದೆ. ಆದರೆ ಅವರು ಮತ್ತೆ ಹಾಗೇ ಮಾಡಲು ಒತ್ತಾಯಿಸಿದ್ದರು" ಸಗೀಂತಾ ಹೇಳಿದ್ದಾರೆ.
ಇನ್ನು ಘಟನೆ ಕುರಿತ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು  ಆಸ್ಪತ್ರೆಯ ಅಧಿಕ್ಷಕ ಡಾ. ಪಿ.ಎಸ್ ಠಾಕೂರ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಗೆ, ನರ್ಸ್, ವಾರ್ಡ್ ಬಾಯ್‍ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಇವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
SCROLL FOR NEXT