ದೇಶ

ಕಳ್ಳರ ಹೆಸರಿನ ಮುಂದೆ 'ಮೋದಿ' ಹೇಳಿಕೆ: ನಾಳೆ ರಾಹುಲ್ ಗಾಂಧಿ ಕೋರ್ಟಿಗೆ ಹಾಜರು

"ಎಲ್ಲಾ ಕಳ್ಳರ, ವಂಚಕರ ಹೆಸರೂ ಮೋದಿ ಎಂದೇ ಆಗಿರುತ್ತದೆ ಎಂಬ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ....

ಪಾಟ್ನಾ: "ಎಲ್ಲಾ ಕಳ್ಳರ, ವಂಚಕರ ಹೆಸರೂ ಮೋದಿ ಎಂದೇ ಆಗಿರುತ್ತದೆ ಎಂಬ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೂಡಿದ್ದ ಮಾನಹಾನಿ ಪ್ರಕರಣದ ಸಂಬಂಧ ರಾಹುಲ್ ಶನಿವಾರ ಪಟ್ನಾ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. 
ಕಳೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ರ್ಯಾ;ಇಯ ವೇಳೆ ರಾಹುಲ್ ಎಲ್ಲಾ ಕಳ್ಳರ, ವಂಚಕರ ಹೆಸರಲ್ಲಿ ಮೋದಿ ಎಂದು ಪದವಿರುತ್ತದೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ, ಪಿಎನ್ಬಿ ವಂಚಕ ನೀರವ್ ಮೋದಿ, ಐಪಿಎಲ್ ಮಾಜಿ ಆಯುಕ್ತ ಲಲತ್ ಮೋದಿ ಹೆಸರನ್ನು ಉಲ್ಲೇಖಿಸಿ ಗಾಂಧಿ ಈ ಆರೋಪ ಮಾಡಿದ್ದರು.
ರಾಹುಲ್ ಅವರ ಈ ಆರೋಪದ ವಿರುದ್ಧ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ಏಪ್ರಿಲ್‌ನಲ್ಲಿ ಇಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಇದೀಗ ಪಟ್ನಾದ ನ್ಯಾಯಾಲಯದಲ್ಲಿಯೂ ರಾಹುಲ್ ವಿರುದ್ಧ ಪ್ರಕರಣ ದಾಖಲಾಗಿದೆ.ಸಿಜೆಎಂ ಶಶಿಕಾಂತ್ ರಾಯ್ ಅವರು ಎಸಿಜೆಎಂ ಕುಮಾರ್ ಗುಂಜನ್ ಅವರನ್ನೊಳಗೊಂಡ ಪೀಠದ ಮುಂದೆ ಮೊಕದ್ದಮೆ ವಿಚಾರಣೆಗೆ ಬರಲಿದೆ ಎಂದು ಮೂಲಗಳು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

SCROLL FOR NEXT