ದೇಶ

ಜೈ ಶ್ರೀರಾಮ್ ಘೋಷಣೆ ಜನರ ಮೇಲೆ ಹಲ್ಲೆ ಮಾಡಲು ಬಳಕೆ: ಅಮರ್ಥ್ಯ ಸೇನ್

Sumana Upadhyaya
ಕೋಲ್ಕತ್ತಾ: ಮಾ ದುರ್ಗಾದಂತೆ ಜೈ ಶ್ರೀರಾಮ್ ಘೋಷಣೆ ಬಂಗಾಳದ ಸಂಸ್ಕೃತಿ ಜೊತೆ ಬೆರೆತುಕೊಂಡಿಲ್ಲ, ಅದನ್ನು ಜನರ ಮೇಲೆ ಹಲ್ಲೆ ಮಾಡಲು ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ  ಅಮರ್ತ್ಯ ಸೇನ್ ಆರೋಪಿಸಿದ್ದಾರೆ.
ಬಂಗಾಳಿ ಜನರ ಜೀವನದಲ್ಲಿ ಮಾ ದುರ್ಗಾ ಎಂದರೆ ಸರ್ವವ್ಯಾಪಿಯಾಗಿದೆ ಎಂದು ಜಾದವ್ ಪುರ ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಆದರೆ ಜೈ ಶ್ರೀರಾಮ್ ಘೋಷಣೆ ಬಂಗಾಳಿ ಸಂಸ್ಕೃತಿ ಜೊತೆ ಬೆರೆತುಕೊಂಡಿಲ್ಲ, ಇಂದಿನ ದಿನಗಳಲ್ಲಿ ರಾಮನವಮಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದನ್ನು ನಾನು ಈ ಹಿಂದೆ ಕೇಳಿರಲಿಲ್ಲ. ನಿನ್ನ ಇಷ್ಟದ ದೇವರು ಯಾರು ಎಂದು ನನ್ನ 4 ವರ್ಷದ ಮೊಮ್ಮಗಳಲ್ಲಿ ಕೇಳಿದೆ, ಅದಕ್ಕವಳು ಮಾ ದುರ್ಗ ಎಂದಳು, ಮಾ ದುರ್ಗ ನಮ್ಮ ಜೀವನದಲ್ಲಿ ಸರ್ವವ್ಯಾಪಿಯಾಗಿದೆ ಎಂದರು.
ಇಂದು ಜೈ ಶ್ರೀರಾಮ್ ಘೋಷಣೆಯನ್ನು ಜನರ ಮೇಲೆ ಹೊಡೆಯಲು, ಹಲ್ಲೆ ಮಾಡಲು ಬಳಸಲಾಗುತ್ತಿದೆ ಎಂದು ಖ್ಯಾತ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಹೇಳಿದ್ದಾರೆ.
ಇತ್ತೀಚೆಗೆ ದೇಶದ ಹಲವು ಭಾಗಗಳಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಮಾಡಿ, ಇಲ್ಲದಿದ್ದರೆ ಯುವಕರ ಮೇಲೆ ಹಲ್ಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಅಮರ್ಥ್ಯ ಸೇನ್ ಈ ಹೇಳಿಕೆ ನೀಡಿದ್ದಾರೆ.
SCROLL FOR NEXT