ದೇಶ

ರಾಹುಲ್ ಟ್ವಿಟರ್ ಹಿಂಬಾಲಕರ ಸಂಖ್ಯೆ 10 ದಶಲಕ್ಷಕ್ಕೆ ಏರಿಕೆ

Srinivas Rao BV
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯ ಹಿಂಬಾಲಕರ ಸಂಖ್ಯೆ 10 ದಶಲಕ್ಷ ದಾಟಿದ್ದು, ಇದನ್ನು ರಾಹುಲ್ ಹೊಸ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. 
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಇದೇ ಮೊದಲ ಬಾರಿಗೆ ಅಮೇಥಿಗೆ ಭೇಟಿ ನೀಡುವ ಮುನ್ನ ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ತಮ್ಮ ಬೆಂಬಲಿಗರು, ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದ್ದಾರೆ. 
'10 ದಶಲಕ್ಷ ಟ್ವಿಟರ್ ಹಿಂಬಾಲಕರು- ಧನ್ಯವಾದಗಳು ಪ್ರತಿಯೊಬ್ಬರಿಗೂ. ಈ ಮೈಲಿಗಲ್ಲನ್ನು ನಾನು ಅಮೇಥಿಯಲ್ಲಿ ಸಂಭ್ರಮಿಸಲಿದ್ದೇನೆ. ಅಲ್ಲಿನ ನಾನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಭೇಟಿ ಮಾಡಲಿದ್ದೇನೆ' ಎಂದು ಟ್ವೀಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ಪಕ್ಷ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ, ಪರ್ಯಾಯ ವ್ಯಕ್ತಿಯನ್ನು ಅರಿಸಲಾಗದೆ ಪಕ್ಷ ಪರದಾಡುತ್ತಿದೆ. ಇನ್ನೊಂದೆಡೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮಿತ್ರಪಕ್ಷದ ಆಡಳಿತ ಡೋಲಾಯಮಾನವಾಗಿದೆ. 
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ರಾಹುಲ್ ಗಾಂಧಿ ಅವರನ್ನು ಜನರು ಟ್ವಿಟರ್ ನಲ್ಲಿ ಮೊದಲಿಗಿಂತ ಹೆಚ್ಚಾಗಿ ಹಿಂಬಾಲಿಸುತ್ತಿದ್ದಾರೆ. ಇದರಿಂದ ಕಳೆದ ವರ್ಷದ ಟ್ವಿಟರ್ ನಲ್ಲಿ 6.9 ದಶಲಕ್ಷ ಹಿಂಬಾಲಕರನ್ನು ಹೊಂದಿದೆ ಕಾಂಗ್ರೆಸ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಶಿ ತರೂರ್ ಅನ್ನು ರಾಹುಲ್ ಹಿಂದಕ್ಕೆ ಹಾಕಿದ್ದಾರೆ. 
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದಾದ್ಯಂತ 48.5 ದಶಲಕ್ಷ ಹಿಂಬಾಲಕರಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರತುಪಡಿಸಿದರೆ ಇದು ಮೂರನೇ ಅತಿ ಹೆಚ್ಚು ಹಿಂಬಾಲಕರಿರುವ ಖಾತೆಯಾಗಿದೆ.
SCROLL FOR NEXT